ಪುತ್ತೂರು: ತೋಡಿನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಪತಿಯ ಸಹೋದರನಿಂದ ಕೊಲೆ

Prakhara News
1 Min Read

ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾರುಣ ಘಟನೆಯಲ್ಲಿ ಬಂಟ್ವಾಳದ ಕೆದಿಲ ಗ್ರಾಮದ ಮಮತಾ ಎಂಬ ಮಹಿಳೆ ಹತ್ಯೆಯಾದ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ಮೃತ ಮಮತಾರವರ ಗಂಡ ಗಣಪತಿ @ ರಾಮಣ್ಣಗೌಡ (44) ನೀಡಿದ ದೂರಿನಂತೆ, ತಮ್ಮ ಸಹೋದರನಾದ ಬಂಟ್ವಾಳ ಕೆದಿಲ ನಿವಾಸಿ ಲೋಕಯ್ಯ @ ಸುಂದರ ಎಂಬಾತನು, ತನ್ನ ವಿವಾಹ ವಿಚ್ಛೇದನದ ಪರಿಹಾರ ಹಣದ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ, ಆಗಸ್ಟ್ 6ರಂದು ಕೆದಿಲ ಗ್ರಾಮದ ವಳಕುಮೇರು ಎಂಬಲ್ಲಿ ಮಮತಾರವರ ಮೇಲೆ ಹಲ್ಲೆ ನಡೆಸಿ, ಪ್ರಜ್ಞಾಹೀನರಾದ ನಂತರ ಹರಿಯುವ ನೀರಿಗೆ ತಳ್ಳಿದ್ದಾನೆ.

ಈ ಪರಿಣಾಮ ಮಮತಾರವರು ಮೃತಪಟ್ಟಿದ್ದು, ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 69/2025, ಕಲಂ 115(2), 103(1) BNS 2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share This Article
Leave a Comment