‘ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನ ಮರುಬಳಸಬಾರದು’- ಆರೋಗ್ಯ ಇಲಾಖೆ ಸೂಚನೆ

Prakhara News
1 Min Read

ಬೆಂಗಳೂರು : ಅಡುಗೆ ಎಣ್ಣೆ ಮರುಬಳಕೆ ಮಾಡುತ್ತಿರುವ ಮಾಹಿತಿ ಬೆನ್ನಲ್ಲೇ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಸದಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.

ಎಣ್ಣೆ ಉದ್ದಿಮೆದಾರರು ಹಾಗೂ ಬೇಕರಿ, ಹೋಟೆಲ್‌ನವರಿಗೆ ಖಡಕ್ ನಿರ್ದೇಶನ ಹೊರಡಿಸಿದ್ದಾರೆ. ಈ ಮೂಲಕ ಅಡುಗೆ ಎಣ್ಣೆ ತಯಾರಿಕಾ ಘಟಕದವರು ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ಗುಣಮಟ್ಟ ವಿಶ್ಲೇಷಣೆ ತಪಾಸಣೆ ಮಾಡಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಹೆಚ್ಚಾದ ಹೃದಯಘಾತ ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕೆಲ ಅಡುಗೆ ಎಣ್ಣೆಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವಾಗಿ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕುರಿತು ತಜ್ಞರ ಜೊತೆ ಪರಾಮರ್ಶಿಸಿ ಆಹಾರ ಸುರಕ್ಷತಾ ಇಲಾಖೆಯಿಂದ ಸೂಚನೆ ನೀಡಿದೆ. ಸದ್ಯ 32,68,999 ಲೀಟರ್ ಬಳಕೆ ಮಾಡಿದ ಎಣ್ಣೆಯಿದ್ದು, ಸೂಕ್ತ ವಿಲೇವಾರಿ ಹಾಗೂ ಬಯೋ ಡಿಸೇಲ್ ಘಟಕಕ್ಕೆ ರವಾನಿಸುವಂತೆ ಹೇಳಿದೆ.

ಪ್ಯಾಕಿಂಗ್, ಲೇಬಲಿಂಗ್ ಸ್ವಚ್ಛತೆ, ಎ&ಡಿ ವಿಟಮಿನ್ ಇರುವ ಎಣ್ಣೆ ಮಾರಾಟ ಮಾಡುವಂತೆ ತಿಳಿಸಿದ್ದಾರೆ. ಜೊತೆಗೆ ಟ್ರಾನ್ಸ್ ಫ್ಯಾಟ್ ಕಡಿಮೆ ಇರುವ ಎಣ್ಣೆಯನ್ನು ಬಳಕೆ ಮಾಡಬೇಕು. ಒಂದು ಬಾರಿ ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಮತ್ತೆ ಮರುಬಳಕೆ ಮಾಡಬಾರದು ಎಂದು ಹೋಟೆಲ್ ಬೇಕರಿಯವರಿಗೆ ಸೂಚಿಸಿದೆ.

Share This Article
Leave a Comment