ಮತ್ತೊಂದು ಟ್ವಿಸ್ಟ್: ದೂರುದಾರ ಗುರುತಿಸಿದ್ದ ಸ್ಥಳದಲ್ಲಿ ತಲೆ ಬುರುಡೆ, ಮೂಳೆಗಳು ಪತ್ತೆ

Prakhara News
1 Min Read

ಧರ್ಮಸ್ಥಳ: ಇಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬುದಾಗಿ ದೂರುದಾರನೊಬ್ಬ ತಪ್ಪೊಪ್ಪಿಗೆ ಕೇಸ್ ನಿಂದಾಗಿ ಎಸ್ಐಟಿಯಿಂದ ಅಸ್ಥಿಪಂಜರಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ದೂರುದಾರ ಗುರುತಿಸಿದ್ದಂತ ಸೈಟ್ ನಂ.6ರಲ್ಲಿ ಆರಂಭದಲ್ಲಿ ಪುರುಷನಿಗೆ ಸೇರಿದ್ದು ಎನ್ನಲಾದಂತ ಮೂಳೆಗಳು ಪತ್ತೆಯಾಗಿದ್ದವು. ಇದೀಗ ಮತ್ತೊಂದು ಟ್ವಿಸ್ಟ್ ಎನ್ನುವಂತೆ ದೂರುದಾರ ಗುರುತಿಸಿದ್ದಂತ ಸ್ಥಳದಲ್ಲಿ ತಲೆ ಬುರುಡೆ, ಮೂಳೆಗಳು ಪತ್ತೆಯಾಗಿವೆ.

ಇಂದು ಧರ್ಮಸ್ಥಳದ ನೇತ್ರಾವದಿ ನದಿ ತೀರದಲ್ಲಿ ದೂರುದಾರ ಗುರುತಿಸಿದ್ದಂತ 6ನೇ ಸೈಟ್ ನಲ್ಲಿ ಎಸ್ಐಟಿಯಿಂದ ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆಯಲ್ಲಿ ಆರಂಭದಲ್ಲಿ ಎರಡು ಮೂಳೆ, ಆ ಬಳಿಕ 7-8 ಮೂಳೆಗಳು ದೊರೆತಿದ್ದವು. ಒಟ್ಟಾರೆ ಪುರುಷನ ದೇಹದ ತಲೆ ಬುರುಡೆ, ಕೈ-ಕಾಲಿನ ಮೂಳೆಗಳು ಸೇರಿದಂತೆ 10 ಮೂಳೆಗಳು ದೊರೆತಿವೆ ಎನ್ನಲಾಗುತ್ತಿದೆ.

ಈ ರೀತಿಯಾಗಿ ಮೂಳೆಗಳು ದೊರೆತ ನಂತ್ರ 6ನೇ ಪಾಯಿಂಟ್ ಅನ್ನು ಎಸ್ಐಟಿ ಅಧಿಕಾರಿಗಳು ಸುರಕ್ಷಿತ ಸ್ಥಳವೆಂದು ಗುರುತಿಸಿದ್ದಾರೆ. ದೊರೆತಿರುವಂತ ಅಸ್ಥಿ ಪಂಜರಗಳ ಬಗ್ಗೆ ಎಫ್ಎಸ್ಎಲ್ ತಂಡವು ಪರೀಕ್ಷೆಯಲ್ಲಿ ತೊಡಗಿದೆ.

Share This Article
Leave a Comment