ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಲವಂತವಾಗಿ ನೂರಾರು ಶವಗಳನ್ನ ಹೂತುಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ದೂರು ನೀಡಿದ್ದು, ಈ ಸಬಂಧ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿದೆ. ಅದರಂತೆ ಇದೀಗ ಎಸ್ಐಟಿ ತನಿಖೆ ತೀವ್ರಗೊಳಿಸಿದೆ. ಜುಲೈ 28 ರಂದು ಧರ್ಮಸ್ಥಳ ಫೀಲ್ಡ್‌ಗೆ ಇಳಿದಿದ್ದ ಎಸ್‌ಐಟಿ ದೂರುದಾರನನ್ನ ಕರೆದೊಯ್ದು 13 ಸ್ಥಳ ಗುರುತು ಮಾಡಿದ್ದು, ಇದೀಗ ಭೂಮಿ ಅಗೆಯುವ ಕೆಲಸ ಶುರುವಾಗಿದೆ.


ಈ ನಡುವೆ ಎಸ್ಐಟಿ ಅಧಿಕಾರಿಗಳು ಸಹಾಯವಾಣಿ (helpline number) ಆರಂಭಿಸಿದ್ದು, ಪ್ರಕರಣದ ಬಗ್ಗೆ ಮಾಹಿತಿಗಾಗಿ 0824-2005301ಕ್ಕೆ ಮಾಹಿತಿ ನೀಡುವಂತೆ ತಿಳಿಸಿದೆ.ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳಿಸಿರುವ ಎಸ್‌ಐಟಿ ತಂಡ ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಒಂದೊಂದೆ ಜಾಗಗಳನ್ನು ಅಗೆದು ಶೋಧ ನಡೆಸುತ್ತಿದ್ದಾರೆ.
ಸದ್ಯ, ದೂರುದಾರ ಸೂಚಿಸಿದ 5 ಸ್ಪಾಟ್‌ಗಳಲ್ಲಿ ಈಗಾಗಲೇ ಕಳೇಬರ ಹುಡುಕಾಟ ಮುಕ್ತಾಯವಾಗಿದೆ. ಆದ್ರೆ, ಇಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಈ ನಡುವೆ ಎಸ್‌ಐಟಿ ತಂಡ ಮಂಗಳೂರಿನ ಎಸ್ಐಟಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿದ್ದು, 0824-2005301ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದೆ.ಮಾಸ್ಕ್ ಧರಿಸಿರುವ ಅನಾಮಿಕ ವ್ಯಕ್ತಿ ತಾನು ಈಗಾಗಲೇ ನೂರಾರು ಶವಗಳನ್ನು ನೇತ್ರಾವತಿ ನದಿ ತೀರದಲ್ಲಿ ಹೂತು ಹಾಕಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದ. ಅದರಂತೆ ನಿನ್ನೆ ಎಸ್‌ಐಟಿ ಆತ ತೋರಿಸಿದ್ದ ಜಾಗದಲ್ಲಿ ಉತ್ಖನನ ನಡೆಸಿತ್ತು.
ಭಾರೀ ಮಳೆಯ ನಡುವೆಯೇ ತೀವ್ರ ಬಂದೋಬಸ್ತ್‌ನಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೆ ಆತ ತೋರಿಸಿದ ಮೊದಲ ಜಾಗದಲ್ಲಿ ಯಾವುದೇ ಅಸ್ಥಿ ಪಂಜರ ಸಿಕ್ಕಿರಲಿಲ್ಲ. ಬಳಿಕ ಆತನೇ ಗುರುತು ಮಾಡಿದ್ದ 2 ಹಾಗೂ 3ನೇ ಜಾಗದಲ್ಲೂ ಎಸ್‌ಐಟಿ ಟೀಂ ಜಾಲಾಡಿತ್ತು. ಆದರೆ ಅಲ್ಲೂ ಯಾವುದೇ ಅಸ್ಥಿಪಂಜರ, ಯಾವುದೇ ತಲೆ ಬುರುಡೆ ಸೇರಿದಂತೆ ಏನೊಂದು ಕುರುಹೂ ಪತ್ತೆಯಾಗಿರಲಿಲ್ಲ.
ಈ ನಡುವೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ತಲೆಬುರುಡೆ, ಶವಗಳನ್ನು ಹೂತಿಟ್ಟಿರುವುದರ ಕುರಿತು ಯಾವುದೇ ಮಾಹಿತಿ ನೀಡಲು ದೂರವಾಣಿ ಸಂಖ್ಯೆ 0824-2005301 ಸಂಖ್ಯೆಯನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.ಜುಲೈ 28 ರಂದು ಧರ್ಮಸ್ಥಳ ಫೀಲ್ಡ್‌ಗೆ ಇಳಿದಿದ್ದ ಎಸ್‌ಐಟಿ ದೂರುದಾರನನ್ನ ಕರೆದೊಯ್ದು 13 ಸ್ಥಳ ಗುರುತು ಮಾಡಿತ್ತು. ನಿನ್ನೆ ಆತನ ಸಮ್ಮುಖದಲ್ಲೇ ನೇತ್ರಾವತಿ ತಟದಲ್ಲಿ ಗುಂಡಿ ತೋಡಲಾಗಿತ್ತು.
ಆದ್ರೆ ಅಲ್ಲಿ ಯಾವು ಶವ, ಅಸ್ಥಿಪಂಜರ ಸಿಕ್ಕಿರಲಿಲ್ಲ. ಇಂದು (ಜುಲೈ 30) ನಾಲ್ಕು ಕಡೆ ಮತ್ತೆ ಶೋಧ ನಡೆಸಲಾಗಿತ್ತು. ಅಷ್ಟಕ್ಕೂ ನಿನ್ನೆ ಮಿನಿ ಹಿಟಾಚಿ ಬಳಸಿ ಗುಂಡಿ ತೋಡಲಾಗಿತ್ತು. ಆದ್ರೆ ಇದು ರಿಸರ್ವ್ ಫಾರೆಸ್ಟ್ ಆಗಿರುವುದರಿಂದ ಜೆಸಿಬಿ ಬಳಕೆಗೆ ಬ್ರೇಕ್ ಬಿದ್ದಿದ್ದು ಇಂದು ಕಾರ್ಮಿಕರಿಂದಲೇ ಗುಂಡಿ ಅಗೆಯಲಾಗಿತ್ತು.
