ಶವ ಹೂತಿಟ್ಟ ಪ್ರಕರಣ: ಅಗೆಯುವಾಗ ಮಹತ್ವದ ಕುರುಹು ಪತ್ತೆ..!!

Prakhara News
1 Min Read

ಧರ್ಮಸ್ಥಳ: ಇಲ್ಲಿನ ಶವ ಹೂತಿಟ್ಟ ಪ್ರಕರಣ ಸಂಬಂಧ ಸತತ ನಾಲ್ಕನೆ ದಿನವೂ ಶೋಧ ಕಾರ್ಯ ಮುಂದುವರೆದಿದೆ. ಇಂದು ಸೈಟ್ ನಂ..1ರಲ್ಲಿ ಮಹತ್ವದ ಕುರುಹುಗಳು ಪತ್ತೆಯಾಗಿದ್ದಾವೆ.

ಇಂದು ಧರ್ಮಸ್ಥಳದ ಸೈಟ್ ನಂ.1ರಲ್ಲಿ ಶೋಧ ಕಾರ್ಯವನ್ನು ಎಸ್ಐಟಿ ಅಧಿಕಾರಿಗಳ ತಂಡ ಮುಂದುವರೆಸಿದೆ. ಸೈಟ್ ನಂ.1ರಲ್ಲಿ 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಪತ್ತೆಯಾಗಿವೆ.

ಸೈಟ್ ನಂ.1ರಲ್ಲಿ ಪತ್ತೆಯಾದಗಿರುವಂತ ಎಟಿಎಂ ಕಾರ್ಡ್ ನಲ್ಲಿ ಪುರುಷನ ಹೆಸರು ನಮೂದಾಗಿದ್ದರೇ, ಲಕ್ಷ್ಮೀ ಎಂಬ ಹೆಸರಿನಲ್ಲಿ ಇರುವಂತ ಮಹಿಳೆಯ ಪ್ಯಾನ್ ಕಾರ್ಡ್ ಕೂಡ ಪತ್ತೆಯಾಗಿದೆ. ಒಂದು ಬ್ಯಾಗ್ ಕೂಡ ಪತ್ತೆಯಾಗಿರುವ ಬಗ್ಗೆ ಎಸ್ಐಟಿಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಸೈಟ್ ನಂ.1ರಲ್ಲಿ ಇಷ್ಟೆಲ್ಲಾ ವಸ್ತುಗಳು ಪತ್ತೆಯಾಗಿರೋದನ್ನು ಎಸ್ಐಟಿ ಕೂಡ ದೃಢಪಡಿಸಿದೆ. ಆ ಮೂಲಕ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತೆ, ಮಹತ್ವದ ಸುಳಿವುಗಳು ಸಿಕ್ಕಂತೆ ಆಗಿದೆ.

Share This Article
Leave a Comment