ಧರ್ಮಸ್ಥಳ ಪ್ರಕರಣ: ಗುರುತು ಮಾಡಿದ ಎರಡನೇ ಸ್ಥಳದಲ್ಲೂ ಸಿಗದ ಮಾನವ ಅವಶೇಷ

Prakhara News
1 Min Read

ಧರ್ಮಸ್ಥಳ: ನೂರಾರು ಮೃತ ದೇಹಗಳನ್ನು ಧರ್ಮಸ್ಥಳ ಸುತ್ತ ಮುತ್ತ ಹೂತು ಹಾಕಿದ್ದೇನೆಂದು ವ್ಯಕ್ತಿಯೊಬ್ಬ ದೂರು ನೀಡಿದ ಸಂಬಂಧ ರಚನೆಯಾದ ಎಸ್‌ಐಟಿ ತಂಡ ಎರಡನೇ ದಿನವೂ ಶೋಧ ಕಾರ್ಯ ನಡೆಸಿದೆ.

ಎರಡನೇ ದಿನವಾದ ಬುಧವಾರ ಬೆಳಗ್ಗೆ 11.30 ರ ಸುಮಾರಿಗೆ ಎರಡನೇ ಗುರುತು ಸ್ಥಳ ಅಗೆಯುವ ಕಾರ್ಯ ನಡೆದಿದ್ದು ಅಲ್ಲಿ ಯಾವುದೇ ಮಾನವ ಅವಶೇಷಗಳು ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೂರನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಒಟ್ಟು 13 ಸ್ಥಳಗಳಲ್ಲಿ ಮೃತದೇಹ ಹೂತು ಹಾಕಿರುವುದಾಗಿ ದೂರುದಾರ ಆರೋಪಿಸಿದ್ದ.

ಈ ನಡುವೆ ಎಸ್‌ಐಟಿ ತಂಡ 1995ರಿಂದ ಈವರೆಗೆ ಧರ್ಮಸ್ಥಳದಲ್ಲಿ ಕಾರ್ಯನಿರ್ವಹಿಸಿದ ಪೊಲೀಸರ ಪಟ್ಟಿಯನ್ನು ಕೇಳಿದೆ ಎಂದು ತಿಳಿದು ಬಂದಿದೆ.

Share This Article
Leave a Comment