ಪಹಲ್ಗಾಮ್ ದಾಳಿಯ ಮೂವರು ಶಂಕಿತ ಉಗ್ರರ ಎನ್‌ಕೌಂಟರ್

Prakhara News
1 Min Read

ಶ್ರೀನಗರ : ಶ್ರೀನಗರದ ಡಚಿಗಮ್ ರಾಷ್ಟ್ರೀಯ ಉದ್ಯಾನವನದ ಬಳಿಯ ಹರ್ವಾನ್ ಪ್ರದೇಶದಲ್ಲಿ ಸೋಮವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಹಲ್ಗಾಮ್ ದಾಳಿಯ ಮೂವರು ಶಂಕಿತ ಉಗ್ರರನ್ನು ಹೊಡೆದುರುಳಿಸಿದೆ.

ತೀವ್ರವಾದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ” ಎಂದು ಹೇಳುತ್ತಾ, ಸೇನೆಯ ಚಿನಾರ್ ಕಾರ್ಪ್ಸ್ X ನಲ್ಲಿ ಬೆಳವಣಿಗೆಯನ್ನು ದೃಢಪಡಿಸಿತು. ಭಾರತೀಯ ಸೇನೆಯ ಜೊತೆಗೆ, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ತಂಡಗಳು ಸಹ ಆಪರೇಷನ್ ಮಹಾದೇವ್‌ನಲ್ಲಿ ಭಾಗಿಯಾಗಿವೆ.

ಶ್ರೀನಗರದ ಹರ್ವಾನ್‌ನಲ್ಲಿರುವ ಡಚಿಗಮ್ ಅರಣ್ಯದ ಮೇಲ್ಭಾಗದಲ್ಲಿ ವಿದೇಶಿ ಭಯೋತ್ಪಾದಕರ ಚಲನವಲನಗಳನ್ನು ಭಾರತೀಯ ಪಡೆಗಳು ತಡೆದಿವೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಅಲೆಮಾರಿಗಳು ಪಡೆಗಳಿಗೆ ಸುಳಿವು ನೀಡಿದ್ದಾರೆ ಎಂದು ಎಎನ್ ಇಂಡಿಯಾ ಟುಡೇ ವರದಿ ತಿಳಿಸಿದೆ.

Share This Article
Leave a Comment