ಇನ್ಮುಂದೆ ನಿಶ್ಚಿತಾರ್ಥ ಮಾತುಕತೆಯಲ್ಲಿ ಭಾಗಿಯಾದವರ ವಿರುದ್ಧವೂ ಕಾನೂನು ಕ್ರಮ!!

Prakhara News
1 Min Read

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ-2025ಕ್ಕೆ ಅನುಮೋದನೆ ನೀಡಲಾಗಿದೆ. ಈ ಕಾಯ್ದೆ ಸದನದಲ್ಲಿ ಮಂಡನೆಯಾಗಿ ಒಪ್ಪಿಗೆ ದೊರೆತರೇ ನಿಶ್ಚಿತಾರ್ಥ ಮಾತುಕತೆಯಲ್ಲಿ ಭಾಗಿಯಾದವರ ವಿರುದ್ಧವೂ ಕಾನೂನು ಕ್ರಮ ಆಗಲಿದೆ.

ಹೌದು ಇನ್ಮುಂದೆ ಬಾಲ್ಯ ವಿವಾಹದಂತ ನಿಶ್ಚಿತಾರ್ಥದಲ್ಲಿ ಭಾಗಿಯಾದವರ ವಿರುದ್ಧವೂ ಕ್ರಮವಾಗುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಈ ಸಲುವಾಗಿ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ-2025ಕ್ಕೆ ಅನುಮೋದನೆ ನೀಡಲಾಗಿದೆ.

ಇದಷ್ಟೇ ಅಲ್ಲದೇ ಬಾಲ್ಯ ವಿವಾಹಕ್ಕೆ ಕುಟುಂಬಸ್ಥರ ಒಪ್ಪಿಗೆ ಇದ್ದರೂ ಇನ್ಮುಂದೆ ಕಾನೂನು ಕ್ರಮ ಆಗಲಿದೆ. ತೊಟ್ಟಿಲು ಮದುವೆಯಾದರೂ ಶಿಕ್ಷೆಯನ್ನು ಕೈಗೊಳ್ಳುವಂತ ಅವಕಾಶವನ್ನು ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆಯಡಿ ಜಾರಿಗೆ ತರಲಾಗಿದೆ. ಯಾರೇ ಒತ್ತಡ ಹಾಕಿದರೂ ಕ್ರಮ ಕೈಗೊಳ್ಳಲಾಗುತ್ತದೆ.

ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿಗೆ ತಿದ್ದುಪಡಿ

ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿ 2024-2029ಕ್ಕೆ ತಿದ್ದುಪಡಿ ಮಾಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.

ನೀತಿ ದಾಖಲೆಯಲ್ಲಿ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಅಗತ್ಯ ತಿದ್ದುಪಡಿಗಳು ಮತ್ತು ಸ್ಪಷ್ಟಿಕರಣಗಳನ್ನು ಮಾಡಲು ಇಲಾಖೆ ಪ್ರಸ್ತಾಪಿಸಿದೆ. ಈ ಮಾರ್ಪಾಡುಗಳು ಕೇವಲ ಭಾಷೆ ಮತ್ತು ನಿರೂಪಣೆಯ ಸುಧಾರಣೆಗೆ ಮಾತ್ರ ಸೀಮಿತವಾಗಿವೆ, ಅದರ ಮೂಲ ನಿಬಂಧನೆಗಳು ಅಥವಾ ಮೂಲ ಉದ್ದೇಶವನ್ನು ಬದಲಾಯಿಸದೆ ನಿಖರವಾದ ವ್ಯಾಖ್ಯಾನವನ್ನು ಖಚಿತಪಡಿಸಿಕೊಳ್ಳಲು, ಸಂಭಾವ್ಯ ಅಸ್ಪಷ್ಟತೆಯನ್ನು ತಪ್ಪಿಸಲು ಮತ್ತು ಎಲಾ ಪಾಲುದಾರರಿಂದ ಅನುಷ್ಠಾನವನ್ನು ಸುಗಮಗೊಳಿಸಲು ಇದು ಅತ್ಯಗತ್ಯ. ಆದ್ದರಿಂದ ಜಿಸಿಸಿ ನೀತಿಯನ್ನು ತಿದ್ದುಪಡಿಸಲು ಮಾಡಲು ಪ್ರಸ್ತಾಪಿಸಲಾಗಿತ್ತು.

Share This Article
Leave a Comment