Home ಉಡುಪಿ ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟ್ರಕ್ ಟ್ಯಾಂಕ್ ಉರುಳಿಕೆ – ವಾಹನ ಸಂಚಾರ ಸ್ಥಗಿತ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟ್ರಕ್ ಟ್ಯಾಂಕ್ ಉರುಳಿಕೆ – ವಾಹನ ಸಂಚಾರ ಸ್ಥಗಿತ

0

ಉಡುಪಿ ಜೂನ್ 06: ಬೃಹತ್ ಗಾತ್ರದ ಟ್ಯಾಂಕ್ ಸಾಗಿಸುತ್ತಿದ್ದ ಟ್ರಕ್ ರಿವರ್ಸ್ ತೆಗೆಯುವ ವೇಳೆ ಟ್ಯಾಂಕ್ ರಸ್ತೆಗೆ ಉರುಳಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮುಲ್ಕಿ ಜಂಕ್ಷನ್ ಬಳಿ ನಡೆದಿದೆ.
ಟ್ಯಾಂಕ್ ರಸ್ತೆಗೆ ಉರುಳಿದ ಪರಿಣಾಮವಾಗಿ ಕೆಲಕಾಲ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.

ಕುಂದಾಪುರ- ಮಂಗಳೂರು ಕಡೆ ಹೋಗುತ್ತಿದ್ದ ಟ್ರಕ್, ಕಿನ್ನಿಮುಲ್ಕಿ ಸರ್ವಿಸ್ ರಸ್ತೆಯ ಸಮೀಪದ ರಸ್ತೆ ಸೂಚನಾ ಫಲಕ ಅಡ್ಡ ಬಂದ ಕಾರಣ ಮುಂದೆ ಸಾಗಲು ಸಾಧ್ಯವಾಗದೆ ರಸ್ತೆ ಬದಿಯಲ್ಲೇ ನಿಂತಿತ್ತು. ಎರಡು ದಿನ ಅಲ್ಲೇ ನಿಲ್ಲಿಸಿದ್ದ ಚಾಲಕ, ಟ್ರಕ್ ಅನ್ನು ರಿವರ್ಸ್ ತೆಗೆದು ಬೇರೆ ರೂಟ್‌ನಲ್ಲಿ ಹೋಗಲು ಪ್ರಯತ್ನ ಮಾಡಿದ್ದಾನೆ. ಟ್ರಕ್ ಅನ್ನು ಹಿಂದಕ್ಕೆ ತೆಗೆದು ಬೇರೆ ರಸ್ತೆಯಲ್ಲಿ ತೆರಳಲು ಯತ್ನಿಸುತ್ತಿದ್ದಾಗ ಟ್ಯಾಂಕ್ ರಸ್ತೆಗೆ ಉರುಳಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here