Home ತಾಜಾ ಸುದ್ದಿ ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ `ಇ-ಆಫೀಸ್’ ಅನುಷ್ಠಾನ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ `ಇ-ಆಫೀಸ್’ ಅನುಷ್ಠಾನ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

0

ಬೆಂಗಳೂರು: ಗ್ರಾಪಂಗಳ ಆಡಳಿತವನ್ನು ಡಿಜಿಟಲೀಕರಣ ಗೊಳಿಸುವ ನಿಟ್ಟಿನಲ್ಲಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮಪಂಚಾಯಿತಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಿ ಕಡ್ಡಾಯವಾಗಿ ಬಳಕೆ ಮಾಡುವ ಸಂಬಂಧ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯದ ಗ್ರಾಮಪಂಚಾಯಿತಿಗಳು ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಲ್ಲ ಕಡತ ಮತ್ತು ಪತ್ರಗಳನ್ನು ಇ-ಆಫೀಸ್ ಮೂಲಕವೇ ಸಲ್ಲಿಸಲು ನಿರ್ದೇಶನ ನೀಡಲಾಗಿದೆ. ಬಾಗಲಕೋಟೆ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಕಲಬುರಗಿ, ಹಾಸನ, ಹಾವೇರಿ, ಕೊಡಗು, ಕೊಪ್ಪಳ, ವಿಜಯನಗರ, ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾಪಂಚಾಯತ್ ಗಳಿಗೆ ಸೂಚನೆ ನೀಡಲಾಗಿದೆ.

ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೇ 26 ರಿಂದ ಕಡ್ಡಾಯವಾಗಿ ಇ-ಆಫೀಸ್ ಜಾರಿಗೆ ಕ್ರಮವಹಿಸುವಂತೆ ಸಿಇಒಗಳಿಗೆ ಸಂಬಂಧ ಮಹತ್ವದ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here