ಶ್ರೀನಗರ: ಪಹಲ್ಗಾಮ್‌ನಲ್ಲಿ ಸೋಮವಾರ ನಡೆದ ಉಗ್ರರ ಭೀಕರ ದಾಳಿಗೆ ಈ ವರೆಗೆ 26 ಮಂದಿ ಮೃತಪಟ್ಟಿದ್ದಾರೆ. ಬೈಸಾರ್ ಕಣಿವೆಯಲ್ಲಿ ಸೇನೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಇದೀಗ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಮೂವರು ಶಂಕಿತ ಭಯೋತ್ಪಾದಕರ ರೇಖಾಚಿತ್ರಗಳು ಮತ್ತು ಹೆಸರುಗಳನ್ನು ಬಿಡುಗಡೆ ಮಾಡಿದ್ದಾರೆ. ಮೂಲಗಳ ಪ್ರಕಾರ, ಹಶೀಮ್ ಮೂಸಾ ಅಲಿಯಾಸ್ ಸುಲೈಮಾನ್, ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಮತ್ತು ಆದಿಲ್ ಹುಸೇನ್ ಥೋಕರ್ ಎಂಬ ಮೂವರು ಸ್ಥಳೀಯರು ಗುಂಡು ಹಾರಿಸುವ ಮೊದಲು ಹಿಂದೂಗಳನ್ನು ಪ್ರತ್ಯೇಕ ಸ್ಥಳಗಳಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.



ಶಂಕಿತರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಎಂದು ಹೇಳಲಾಗಿದ್ದರೆ, ಇನ್ನೊಬ್ಬ ಉಗ್ರ ಅದೇ ಪ್ರದೇಶದವ ಎಂದು ತಿಳಿದು ಬಂದಿದೆ. ಬಂದೂಕುಧಾರಿಗಳ ಸಮೀಪದಲ್ಲಿದ್ದ ಬದುಕುಳಿದವರು ಉಗ್ರರ ಕುರಿತು ವಿವರಣೆಯನ್ನು ನೀಡಿದ್ದಾರೆ. ಹೆಚ್ಚುವರಿ ದಾಳಿಕೋರರು ದೂರದಲ್ಲಿಯೇ ಇದ್ದರು, ಅವರು ಭದ್ರತಾ ಪಡೆಗಳ ಮೇಲೆ ನಿಗಾ ವಹಿಸುತ್ತಿದ್ದರಬಹುದು ಎಂದು ತಿಳಿದು ಬಂದಿದೆ. ಸದ್ಯ ಉಗ್ರರ ಕುರಿತು ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ.


ದಾಳಿಯ ಕುರಿತು ಭಾರತ ಈಗಾಗಲೇ ಪಾಕಿಸ್ತಾನಕ್ಕೆ ರಾಜತಾಂತ್ರಿಕತೆಯ ಮೂಲಕ ಬಿಸಿ ಮುಟ್ಟಿಸಿದೆ. ಇಂದು ಬಿಹಾರದಲ್ಲಿ ಮೋದಿ ಉಗ್ರರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಅವರು, ಕೇವಲ ಜನರ ಮೇಲೆ ಮಾಡಿದ ದಾಳಿ ಅದಲ್ಲ ಆ ದಾಳಿ ಭಾರತ ಆತ್ಮದ ಮೇಲಾಗಿದೆ, ಯಾರು ಈ ದುಸ್ಸಾಹಸ ಮಾಡಿದ್ದಾರೋ, ಯಾರು ಈ ದಾಳಿಯ ಹಿಂದಿದ್ದಾರೋ, ಅವರಿ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಅವರಿಗೆ ಕೊಡುತ್ತೇವೆ ಎಂದು ಹೇಳಿದ್ದಾರೆ. ಉಗ್ರರನ್ನು ಹೆಡೆಮುರಿ ಕಟ್ಟಿ ನಮ್ಮ ದೇಶದಿಂದ ಹೊರ ಹಾಕುವ ಸಮಯ ಬಂದಿದೆ.
ಭಾರತೀಯರೆಲ್ಲರೂ ಒಗ್ಗಟ್ಟಿನಲ್ಲಿದ್ದರೆ ಉಗ್ರರ ಸೊಂಟ ಮುರುಯುವುದೇನೂ ಕಷ್ಟವಲ್ಲ. ಈ ಭೂಮಿಯಿಂದಲೇ ಅವರನ್ನು ಹೊರಗಟ್ಟುತ್ತೇವೆ ಎಂದು ಹೇಳಿದ್ದಾರೆ. ಸಿಂಧೂ ನದಿ ಒಪ್ಪಂದವನ್ನು ಅತ್ಯಂಗೊಳಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಪಾಕ್‌ಗೆ ದೊಡ್ಡ ಆಘಾತ ನೀಡಿರುವ ಭಾರತ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳಿಗೆ ಭಾರತವನ್ನು ತೊರೆಯಲು ಸೂಚಿಸಿದ್ದು, 48 ಗಂಟೆಗಳ ಗಡುವನ್ನು ನೀಡಿದೆ. ವಾಘಾ ಅಟ್ಟಾರಿ ಬಾರ್ಡರ್‌ನನ್ನು ಮುಚ್ಚಲು ಸೂಚಿಸಲಾಗಿದೆ.