ದಕ್ಷಿಣ ಅಫ್ರಿಕಾಕ್ಕೆ ಉದ್ಯೋಗಕ್ಕೆ ತೆರಳಿದ್ದ ಯುವಕನೋರ್ವ ಅಲ್ಲಿ ಅಕಾಲಿಕವಾಗಿ ಮೃತಪಟ್ಟಿದ್ದು, ಇಂದು ಮೃತದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.



ನರಿಕೊಂಬು ಗ್ರಾಮ ನಿವಾಸಿ ರವಿ ಸಪಲ್ಯ ಅವರ ಪುತ್ರ ರಜತ್(25) ಮೃತಪಟ್ಟ ಯುವಕ.


ಕಳೆದ ಕೆಲ ಸಮಯಗಳಿಂದ ಆತ ದಕ್ಷಿಣ ಆಫ್ರಿಕಾದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಎ. 5ರಂದು ಅಕಾಲಿಕವಾಗಿ ಮೃತಪಟ್ಟಿದ್ದನು ಎನ್ನಲಾಗಿದೆ.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ ಮೃತದೇಹವನ್ನು ಊರಿಗೆ ತರಲು ಸಹಕರಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.