ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ 16 ವರ್ಷದ ಬಾಲಕಿಗೆ ಪದೇಪದೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಮದರಸಾ ಶಿಕ್ಷಕನಿಗೆ 187 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.



ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ತಲಿಪರಂಬ ನ್ಯಾಯಾಲಯವು ಮಂಗಳವಾರ ತೀರ್ಪು ನೀಡಿದೆ. ಅಲಕೋಡ್ ಮೂಲದ ಅಪರಾಧಿ ಮುಹಮ್ಮದ್ ರಫಿಗೆ 9 ಲಕ್ಷ ರೂ. ದಂಡ ವಿಧಿಸಲಾಗಿದೆ.


ಪೊಲೀಸರ ಪ್ರಕಾರ, 2020 ಮತ್ತು 2021 ರ ನಡುವೆ ದೌರ್ಜನ್ಯ ನಡೆದಿದೆ. ರಫಿ ಹುಡುಗಿಯ ಉಂಗುರವನ್ನು ತೋರಿಸುವ ಮೂಲಕ ಆಕೆಯ ವಿಶ್ವಾಸವನ್ನು ಗಳಿಸಿದ್ದಾನೆ. ನಂತರ, ಪದೇಪದೆ ಅಕೆ ಮೇಲೆ ದೌರ್ಜನ್ಯ ಎಸಗಿದ್ದಾನೆ. ಪ್ರಕರಣವನ್ನು ಪಳಯಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ರಫಿ ಎಸಗಿರುವುದು ಪುನರಾವರ್ತಿತ ಅಪರಾದ ಎಂದು ನ್ಯಾಯಾಲಯವು ಗಮನಿಸಿದೆ. ವಲಪಟ್ಟಣಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಅವರ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಹೊಸ ಅಪರಾಧ ಎಸಗಿದಾಗ ಆತ ಜಾಮೀನಿನ ಮೇಲೆ ಹೊರಬಂದಿದ್ದ.
ಒಟ್ಟು ಶಿಕ್ಷೆ 187 ವರ್ಷಗಳಾದರೂ, ರಫಿ ಭಾರತೀಯ ಕಾನೂನಿನಡಿಯಲ್ಲಿ ಗರಿಷ್ಠ 30 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ದಂಡವನ್ನು ಸಂತ್ರಸ್ತೆಗೆ ಪರಿಹಾರವಾಗಿ ಪಾವತಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.