ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತೀ ಮಹಾರುದ್ರಯಾಗದ ಚಪ್ಪರ ಮಹೂರ್ತ ಕಾರ್ಯಕ್ರಮ ನಡೆಯಿತು.



ರುದ್ರಪಾರಾಯಣ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಲಾಯಿತು. ಪ್ರದೀಪ್ ಕಲ್ಕೂರ ಪ್ರತಿಷ್ಠಾನ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಧರ್ಮಸ್ಥಳ ಯೋಜನೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಕಲ್ಲಡ್ಕ ವಲಯ, ಧರ್ಮಸ್ಥಳ ಯೋಜನಾಧಿಕಾರಿಗಳು ವಿಟ್ಲ, ರಾಜ ಬಂಟ್ವಾಳ ಪತ್ರಕರ್ತರು, ಪದ್ಮನಾಭ ರೈ ಕಪದಬೈಲು, ಕೃಷ್ಣಪ್ಪ ಪೂಜಾರಿ ತೋಟ,ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.