Home ಕರಾವಳಿ ವಿಟ್ಲ: ಯುವತಿಗೆ ಅಶ್ಲೀಲ ಮೆಸೇಜ್..! ಕನ್ಯಾನ ನಿವಾಸಿ ಸವಾದ್ ಪೊಲೀಸರ ವಶಕ್ಕೆ

ವಿಟ್ಲ: ಯುವತಿಗೆ ಅಶ್ಲೀಲ ಮೆಸೇಜ್..! ಕನ್ಯಾನ ನಿವಾಸಿ ಸವಾದ್ ಪೊಲೀಸರ ವಶಕ್ಕೆ

0

ವಿಟ್ಲ: ಯುವತಿಯರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಮೆಸೇಜ್ ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಜಂಕ್ಷನ್ ಬಳಿ ನಡೆದಿದೆ.

ಯುವತಿರೋರ್ವಳ ನಂಬರ್ ಕೇಳಿದ್ದ ಈತನಿಗೆ ಆಕೆ ಪರಿಚಯದ ಸ್ನೇಹಿತನ ನಂಬರ್‌ ಕೊಟ್ಟಿದ್ದಳು ಯುವತಿಯ ನಂಬರ್ ಎಂದು ಬಾವಿಸಿ ಯುವಕನಿಗೆ ರಾತ್ರಿಯಿಡಿ ಆಶ್ಲೇಷ ಸಂದೇಶ ಕಳುಹಿಸಿದ್ದಾನೆ. ಬಳಿಕ ಹುಡುಗಿ ಎಂದು ಭೇಟಿಯಾಗಲು ಬಂದಾಗ ಸ್ಥಳೀಯರು ಆತನನ್ನ ಹಿಡಿದು ಪೊಲೀಸರಿಗೆ ಕರೆ ಮಾಡಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬೆಂಗಳೂರಿನ ಕೋರಮಂಗಲದ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಕನ್ಯಾನ ನಿವಾಸಿ ಸವಾದ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here