ಮಂಗಳೂರು: ಫೋಕಸ್ ಫಿಲಂ ಫ್ಯಾಕ್ಟರಿ ಅರ್ಪಿಸುವ, ಸವಿ – ಅಮೋಘವರ್ಷಿಣಿ ನಿರ್ಮಾಣದ ,ಪ್ರಜ್ವಲ್ ಕುಮಾರ್ ಅತ್ತಾವರ ನಿರ್ದೇಶನದ ಹೊಸ ಕೌಟುಂಬಿಕ ತುಳು ಹಾಸ್ಯ ಧಾರವಾಹಿ”ಅಂಬರಪ್ಪು ಫ್ಯಾಮಿಲಿ” ಇಂದಿನಿಂದ ಪ್ರತಿ ಶನಿವಾರ ರಾತ್ರಿ 08:30 ಗಂಟೆಗೆ ಪ್ರಸಾರವಾಗಲಿದೆ.



ಈ ಧಾರವಾಹಿಯ ಮುಖ್ಯ ಪ್ರಾಯೋಜಕರು “ಸನ್ ಪ್ಯೂರ್” ರಿಫೈನ್ಡ್ ಸನ್ ಫ್ಲವರ್ ಆಯಿಲ್ ಹಾಗೂ ಸಹ ಪ್ರಾಯೋಜಕರು ದಿ.ಕರಾವಳಿ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಲಿಮಿಟೆಡ್ ಅತ್ತಾವರ ಮಂಗಳೂರು.


ತುಳುವಿನ ಹಿಟ್ ಧಾರಾವಾಹಿ “ಅಂಬರ ಮರ್ಲೆರ್” returns ತಂಡವು ಈ ಬಾರಿ ಹೊಸ ತುಳು ಹಾಸ್ಯ ಧಾರವಾಹಿಯೊಂದಿಗೆ ಬರುತ್ತಿದ್ದು ಧಾರವಾಹಿಯ ನಾಯಕ ನಟರಾಗಿ ನವೀನ್ ನೆರೋಲ್ತಡಿ ಅಭಿನಯಿಸಿದ್ದಾರೆ, ನಾಯಕಿಯಾಗಿ ಸಿಂಚನ ಪಿ ರಾವ್ ಬಣ್ಣ ಹಚ್ಚಿದ್ದು ತುಳುವಿನ ಹಾಸ್ಯ ದಿಗ್ಗಜರಾದ ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ, ಸುನಿಲ್ ನೆಲ್ಲಿಗುಡ್ಡೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ,ಯದು ವಿಟ್ಲ, ಪ್ರತ್ವಿನ್ ಪೊಳಲಿ, ಕವಿತಾ ಪೂಜಾರಿ,ರಾಜೇಶ್ ಮೀಯಪದವು , ಸವ್ಯರಾಜ್ ಕಲ್ಲಡ್ಕ,ಜಗನ್ನಿವಾಸ್ ಶೆಟ್ಟಿ,ಅಮಿತ್ ಪ್ರಭು, ಅಶೋಕ್ ಬನ್ನೂರು ಹಾಗೂ ಮುಂತಾದವರು ನಟಿಸಿದ್ದಾರೆ.
ಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಪ್ರಜ್ವಲ್ ಕುಮಾರ್ ಅತ್ತಾವರ ನಿರ್ವಹಿಸಿದ್ದು ಸಂಭಾಷಣೆಯನ್ನು ಸೋಮನಾಥ ಶೆಟ್ಟಿ ಮಂಗಲ್ಪಾಡಿ ಬರೆದಿದ್ದಾರೆ.
ಇನ್ನುಳಿದಂತೆ ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಚರಣ್ ಆಚಾರ್ಯ,ಧನರಾಜ್ ರೈ ಪುತ್ತೂರು, ಸಂಕಲನ – ಡಿ.ಐ ಶಿವಂ ಕ್ರಿಯೇಷನ್ಸ್ ಕುಂಬ್ಳೆ,ಶೀರ್ಷಿಕೆ ಹಾಡು ಡೋಲ್ವಿನ್ ಕೊಳಲಗಿರಿ, ಹಿನ್ನಲೆ ಸಂಗೀತ ಕಿಶೋರ್ ಕುಮಾರ್ ಶೆಟ್ಟಿ,ಪ್ರಸಾದನ ಪ್ರಸಾದ್ ಕೊಯಿಲ, ಪ್ರಚಾರ ಕಲೆ ಗಣೇಶ್ ಕೆ, ಧ್ವನಿ ಮುದ್ರಣ ಕಿಶೋರ್ ಕುಮಾರ್ ಉಪ್ಪಿನಂಗಡಿ, ಬೆಳಕು ಸಹಾಯ ಪ್ರಜ್ವಲ್ ಆಚಾರ್ಯ , ಬೆಳಕು ಹಾಗೂ ಧ್ವನಿ ಮುದ್ರಣ ಯುನಿಟ್ ರಾಜ್ ಪ್ರೊಡಕ್ಷನ್ಸ್ ಪುತ್ತೂರು ತಂಡದಲ್ಲಿದ್ದಾರೆ.
ಪುತ್ತೂರಿನ ಆಸುಪಾಸಿನಲ್ಲಿ ಈ ಧಾರವಾಹಿಯ ಚಿತ್ರೀಕರಣ ನಡೆದಿದೆ ಎಂದು ಧಾರವಾಹಿಯ ಕಾರ್ಯಕಾರಿ ನಿರ್ಮಾಪಕರಾದ ಸುಂದರ್ ರೈ ಮಂದಾರ ತಿಳಿಸಿದರು.