ಮಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದ ದೇಶದ ಕರಾವಳಿ ತೀರದುದ್ದಕ್ಕೂ ನಡೆಯುತ್ತಿರುವ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್ 2025 ಬುಧವಾರ ಸಂಜೆ ಮಂಗಳೂರಿಗೆ ಆಗಮಿಸಿತು.



ಪಣಂಬೂರು ಬೀಚಿನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಓ ಡಾ. ಕೆ. ಆನಂದ್, ಎಸ್ಪಿ ಯತೀಶ್ ಮತ್ತಿತರರು ಸೈಕಲ್ ರ್ಯಾಲಿಯನ್ನು ಸ್ವಾಗತಿಸಿದರು. ಇದನ್ನೂ ಓದಿ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿಯ ವರದಿ ತಿರಸ್ಕರಿಸಿದ ಭಾರತ..! ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಂದರೆ ಸಿಐಎಸ್‌ಎಫ್ ಭಾರತದ ಭದ್ರತಾ ಮೂಲಸೌಕರ್ಯದ ಆಧಾರಸ್ತಂಭವಾಗಿದೆ. ಪ್ರಮುಖ ಕೈಗಾರಿಕಾ ಕೇಂದ್ರಗಳು, ವಿಮಾನ ನಿಲ್ದಾಣಗಳು, ಮೆಟ್ರೋ ಜಾಲಗಳು, ಪರಮಾಣು ಸ್ಥಾಪನೆ ಮತ್ತು ಪ್ರಮುಖ ಕರಾವಳಿ ಪ್ರದೇಶಗಳನ್ನು ಸಿಐಎಸ್‌ಎಫ್ ರಕ್ಷಿಸುತ್ತಿದೆ.


ಭಾರತದ ಆರ್ಥಿಕ ಜೀವನಾಡಿಗಳನ್ನು ರಕ್ಷಿಸುವುದರಿಂದ ಹಿಡಿದು ಲಕ್ಷಾಂತರ ಜನರ ಸುರಕ್ಷತೆಯನ್ನು ಮಾಡುತ್ತಿದೆ. ಭಾರತದ 7,500 ಕಿಲೋ ಮೀಟರ್ ಕರಾವಳಿಯು ವ್ಯಾಪಾರ, ಆರ್ಥಿಕತೆ ಮತ್ತು ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರೊಂದಿಗೆ, ಸಿಐಎಸ್‌ಎಫ್ ಕರಾವಳಿ ಭದ್ರತೆ, ಪ್ರಮುಖ ಬಂದರುಗಳು, ಕಡಲ ಮೂಲಸೌಕರ್ಯಗಳನ್ನು ರಕ್ಷಿಸುವುದು ಮತ್ತು ಕರಾವಳಿ ಸಮುದಾಯಗಳಲ್ಲಿ ವಿಶ್ವಾಸವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಾರ್ಚ್ 7ರಂದು ಈ ಕೋಸ್ಟಲ್ ಸೈಕ್ಲೋಥಾನ್ 2025ಕ್ಕೆ ಚಾಲನೆ ನೀಡಲಾಗಿತ್ತು.