Home ಕರಾವಳಿ ಬೆಳ್ತಂಗಡಿ: ಲೈನ್ ಮ್ಯಾನ್ ಕಿಟ್ಟ ಯಾನೆ ಸುಧಾಕರ ಆಕಸ್ಮಿಕ ಸಾವು..!

ಬೆಳ್ತಂಗಡಿ: ಲೈನ್ ಮ್ಯಾನ್ ಕಿಟ್ಟ ಯಾನೆ ಸುಧಾಕರ ಆಕಸ್ಮಿಕ ಸಾವು..!

0

ಬೆಳ್ತಂಗಡಿ: ನಾರಾವಿಯಲ್ಲಿ ಲೈನ್ ಮ್ಯಾನ್ ಆಗಿ ಕಳೆದ 27 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕಿಟ್ಟ ಯಾನೆ ಸುಧಾಕರ (45ವರ್ಷ) ರವರು  ಮಾ.26ರಂದು ಸಂಜೆ ಆಕಸ್ಮಿಕವಾಗಿ ಅಂಡಿಂಜೆಯಲ್ಲಿ ಸಾವನ್ನಪ್ಪಿದ್ದಾರೆ.

ಸುಧಾಕರ (ಕಿಟ್ಟ) ರವರು ನಾರಾವಿ ತುಂಬೆ ಗುಡ್ಡೆ ಸುರಾಜ ಕೃಪಾ ನಿವಾಸಿಯಾಗಿದ್ದು,ಇಂದು ಸಂಜೆಯ ಸಮಯಕ್ಕೆ ಇವರ ಮೃತದೇಹ ಟಿಸಿ ಹತ್ತಿರ ಅಂಡಿಂಜೆಯಲ್ಲಿ ಪತ್ತೆಯಾಗಿದ್ದು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

ಇವರು ಬೆಳ್ತಂಗಡಿ ಉಪ ವಿಭಾಗ, ಅಂಡಿಂಜೆ ಕ್ಯಾಂಪ್, ವೇಣೂರು ಶಾಖೆಗಳಲ್ಲಿ ಲೈನ್ ಮ್ಯಾನ್ ವೃತ್ತಿಯನ್ನು ಉತ್ತಮವಾಗಿ ನಿರ್ವಹಿಸುತ್ತ, ಊರಿನಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.

ಅವಿವಾಹಿತರಾಗಿದ್ದ ಅವರು ತಾಯಿ, ಓರ್ವ ಸಹೋದರಿ, ಓರ್ವ ಸಹೋದರನನ್ನು .ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here