Home ಕರಾವಳಿ ಬೆಳ್ತಂಗಡಿ: ದ್ವಿಚಕ್ರ ವಾಹನದ ಮೇಲೆ ಮರದ ಕೊಂಬೆ ಬಿದ್ದು ಬ್ಯಾಂಕ್‌ ಉದ್ಯೋಗಿ ಮೃತ್ಯು

ಬೆಳ್ತಂಗಡಿ: ದ್ವಿಚಕ್ರ ವಾಹನದ ಮೇಲೆ ಮರದ ಕೊಂಬೆ ಬಿದ್ದು ಬ್ಯಾಂಕ್‌ ಉದ್ಯೋಗಿ ಮೃತ್ಯು

0

ಬೆಳ್ತಂಗಡಿ: ದ್ವಿಚಕ್ರ ವಾಹನದ ಮೇಲೆ ದೊಡ್ಡ ಗಾತ್ರದ ಮಾವಿನ ಮರದ ಕೊಂಬೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ದಾರುಣ ಘಟನೆ ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಮಸೀದಿ ಸಮೀಪದ ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಜಾರಿಗೆಬೈಲು ಎಂಬಲ್ಲಿ ಮಾ.20ರಂದು ರಾತ್ರಿ 8 ಗಂಟೆಗೆ ನಡೆದಿದೆ.

ಬೆಳಾಲು ಪೆರಿಯಡ್ಕ ಸಮೀಪದ ಕರ್ಪುದ ಗುಡ್ಡೆ ನಿವಾಸಿ ಸಂಜೀವ ಅವರ ಅವಳಿ ಮಕ್ಕಳಲ್ಲಿ ಹಿರಿಯವನಾಗಿದ್ದ ಪ್ರವೀಣ ಎಸ್. ಎಲ್. (25) ಮೃತ ದುರ್ದೈವಿ. ಅವರು ಮಂಗಳೂರಿನ ಐ.ಡಿ.ಎಫ್.ಸಿ. ಬ್ಯಾಂಕ್‌ನ ಉದ್ಯೋಗಿಯಾಗಿದ್ದರು.

ಮಾವಿನ ಮರದ ಕೊಂಬೆ ಬಿದ್ದು ಗಂಭೀರವಾಗಿದ್ದ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದಾಗ್ಯೂ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಮೃತದೇಹವನ್ನ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here