Home ಉಡುಪಿ ಯಕ್ಷಗಾನ ಕಲಾವಿದನಿಂದ ಕಿರಿಯ ಕಲಾವಿದನಿಗೆ ಹಲ್ಲೆ : ಹಿರಿಯ ಕಲಾವಿದನ ಮೇಲೆ ತೀವ್ರ ಆಕ್ರೋಶ ..!

ಯಕ್ಷಗಾನ ಕಲಾವಿದನಿಂದ ಕಿರಿಯ ಕಲಾವಿದನಿಗೆ ಹಲ್ಲೆ : ಹಿರಿಯ ಕಲಾವಿದನ ಮೇಲೆ ತೀವ್ರ ಆಕ್ರೋಶ ..!

0

ಕುಂದಾಪುರ: ಯಕ್ಷಗಾನದ ವೇಷದ ವಿಚಾರದಲ್ಲಿ ಕಿರಿಯ ಕಲಾವಿದನಿಗೆ ಕಲಾವಿದ ಹಲ್ಲೆ ನಡೆಸಿದ ಘಟನೆ ಮಾ. 18ರಂದು ಮಂಗಳವಾರ ರಾತ್ರಿ ಬೈಂದೂರು ತಾಲೂಕಿನ ಎಳ್ಳೂರಿನಲ್ಲಿ ಸಂಭವಿಸಿದೆ.

ಮಾರಣಕಟ್ಟೆ ಯಕ್ಷಗಾನ ಮೇಳದ ಬಿ ತಂಡದಿಂದ ಮಾ. 18 ರಂದು ಬೈಂದೂರು ತಾಲೂಕಿನ ಎಳ್ಳೂರಿನಲ್ಲಿ “ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ” ಯಕ್ಷಗಾನ ನಡೆದಿತ್ತು.

ಈ ವೇಳೆ ನಂದಿ ವೇಷ ಮಾಡುವ ವಿಚಾರದಲ್ಲಿ ಕಲಾವಿದ ಸ್ತ್ರೀ ವೇಷದಾರಿ ಪ್ರದೀಪ್ ನಾರ್ಕಳಿ ಮತ್ತು ಕಲಾವಿದ ಪ್ರದೀಪ್ ನಾಯ್ಕ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿತ್ತು. ಇದೇ ಕಾರಣಕ್ಕೆ ಬೆಳಗಿನ ಜಾವಾ ಆಟ ಮುಗಿದ ಮೇಲೆ ಕಲಾವಿದ ಪ್ರದೀಪ್ ನಾಯ್ಕ್ ಮನೆಗೆ ಹೋಗುವ ಸಂದರ್ಭದಲ್ಲಿ ರಾತ್ರಿ ನಡೆದ ವಿಚಾರವನ್ನು ತಗಾದೆ ತೆಗೆದು ಮೇಳೆದ ಚೌಕಿಯಲ್ಲಿ ಪ್ರದೀಪ್ ನಾರ್ಕಳಿ ಪ್ರದೀಪ್ ನಾಯ್ಕ್ ಗೆ ಕೈ ಯಿಂದ ಹಲ್ಲೆ ಮಾಡಿರುತ್ತಾರೆ.

ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಹಲ್ಲೆ ನಡೆಸಿದ ಹಿರಿಯ ಕಲಾವಿದನ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಪ್ರದೀಪ್ ನಾರ್ಕಳಿ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here