
ಮಂಗಳೂರು: ನಗರದ ಪಣಂಬೂರು ಕೋಸ್ಟ್‌ಗಾರ್ಡ್ ಅಧಿಕಾರಿ ಜೀವನ್ ಕುಮಾರ್ ಎಂಬವರ ಪುತ್ರ ಹಿತೇನ್ ಬದ್ರ (17) ಎಂಬಾತ ಮಾ.12ರಂದು ಕುಂಜತ್‌ಬೈಲ್‌ನಲ್ಲಿರುವ ಮನೆಯಿಂದ ಕಾಣೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ತಿಳಿ ಹಸಿರು ಬಣ್ಣದ ರೌಂಡ್ ಟಿ ಶರ್ಟ್, ನೀಲಿ ಬಣ್ಣದ ಟ್ರ್ಯಾಕ್ ಸೂಟ್ ಧರಿಸಿದ್ದ ಈತ ಬಿಳಿ ಬಣ್ಣದ ಕನ್ನಡಕ ಧರಿಸಿದ್ದಾನೆ. ಇಂಗ್ಲಿಷ್, ಹಿಂದಿ, ಓಡಿಯಾ ಭಾಷೆ ಮಾತನಾಡುತ್ತಾರೆ.
ಈತನನ್ನು ಕಂಡವರು ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.