Home ಕರಾವಳಿ ಕಿನ್ನಿಗೋಳಿ: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಕಿನ್ನಿಗೋಳಿ: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ..!

0

ಕಿನ್ನಿಗೋಳಿ: ಮಂಗಳೂರು ಖಾಸಗಿ ಕಾಲೇಜೊಂದರ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯಲ್ಲಿನಡೆದಿದೆ.

ಮೃತ ವಿದ್ಯಾರ್ಥಿನಿ ದಾಮಸ್ ಕಟ್ಟೆ ನಿವಾಸಿ ಜೆಸ್ಲಿಟಾ ಸೆರಾವೋ ( 21) ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಪದವಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಮಂಗಳವಾರ ಕಾಲೇಜಿಗೆ ರಜೆ ಮಾಡಿ ಮನೆಯಲ್ಲಿದ್ದರು. ಬೆಳಗಿನ ಜಾವ ಹೆತ್ತವರು ಚರ್ಚ್‌ ನಲ್ಲಿ ಪ್ರಾರ್ಥನೆಗೆ ಹೋದ ಸಮಯದಲ್ಲಿ ಈಕೆ ತನ್ನ ಕೋಣೆಯ ಫ್ಯಾನ್ ಗೆ ಚೂಡಿದಾರ್ ಶಾಲ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯವರು ಚರ್ಚ್ ನಿಂದ ವಾಪಸ್ ಮನೆಗೆ ಬಂದಾಗ ಆತ್ಮಹತ್ಯೆ ಪ್ರಕರಣ ಬಯಲಿಗೆ ಬಂದಿದ್ದು ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here