Home ತಾಜಾ ಸುದ್ದಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ :ಕೊಡವ ಕೂಟಾಳಿಯಡ ಕೂಟದಿಂದ ತಾತಂಡ ಜ್ಯೋತಿ ಪ್ರಕಾಶ್‍ಗೆ ಸನ್ಮಾನ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ :ಕೊಡವ ಕೂಟಾಳಿಯಡ ಕೂಟದಿಂದ ತಾತಂಡ ಜ್ಯೋತಿ ಪ್ರಕಾಶ್‍ಗೆ ಸನ್ಮಾನ

0

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೊಡವ ಕೂಟಾಳಿಯಡ ಕೂಟದಿಂದ ಬಾಸ್ಕೆಟ್ ಬಾಲ್ ಆಟಗಾರ್ತಿ ತಾತಂಡ ಜ್ಯೋತಿ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ವಿರಾಜಪೇಟೆ ಜೂನಿಯರ್ ಕಾಲೇಜ್ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುವ ಜೊತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿಯೂ ಗುರುತಿಸಿ ಕೊಂಡಿರುವ ತಾತಂಡ ಜ್ಯೋತಿ ಪ್ರಕಾಶ್ ಅವರ ಸಾಧನೆಯನ್ನು ಪರಿಗಣಿಸಿ ಕೊಡವ ಕೂಟಾಳಿಯಡ ಕೂಟದ ಸದಸ್ಯರು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜ್ಯೋತಿ ಪ್ರಕಾಶ್, ಇದಕ್ಕಿಂತಲೂ ಮೊದಲು ನಾನು ಸನ್ಮಾನಗೊಂಡಿದ್ದರೂ ಕೂಡ ಇದು ನನಗೆ ವಿಶೇಷ ಸನ್ಮಾನವಾಗಿರುತದೆ.

ಕೊಡವಾಮೆಯನ್ನು ಉಳಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವ ಕೊಡವ ಕೂಟಾಳಿಯಡ ಕೂಟ ಯಾರಿಂದಲೂ ಏನನ್ನೂ ನಿರೀಕ್ಷಿಸದೆ ಎಲೆ ಮರೆಯ ಕಾಯಿಯಂತೆ ಇರುವವರನ್ನು ಹುಡುಕಿ ಅವರ ಮನೆ ಮನೆಗೆ ತೆರಳಿ ಅವರನ್ನು ಗೌರವಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭ ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸಂಸ್ಥಾಪಕಿ ಚಿಮ್ಮಚ್ಚಿರ ಪವಿತ ರಜನ್, ಖಜಾಂಚಿ ಬೊಜ್ಪಂಗಡ ಭವ್ಯ ದೇವಯ್ಯ ಮತ್ತು ಸದಸ್ಯೆ ಇಟ್ಟಿರ ಭವ್ಯ ಈಶ್ವರ್ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here