Home ಕರಾವಳಿ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡ ಮಂಗಳೂರು ವಿಮಾನ ನಿಲ್ದಾಣ

ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡ ಮಂಗಳೂರು ವಿಮಾನ ನಿಲ್ದಾಣ

0

ಮಂಗಳೂರು: ಈಗಾಗಲೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಂದ ಮೆಚ್ಚುಗೆಯನ್ನು ಗಳಿಸಿದೆ. ಇದು ವಿಶ್ವದ ಅತ್ಯುತ್ತಮ ಆಗಮನ ನಿಲ್ದಾಣ ಎಂಬ ಜನಪ್ರಿಯತೆಯನ್ನೂ ಗಳಿಸಿದೆ. ಇದಕ್ಕೆ ಸಾಂಕೇತಿಕವಾಗಿ ಈಗ ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ’- ಎಎಸ್‌ಕ್ಯೂ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಮತ್ತು ಸುಗಮವಾದ ಪ್ರಯಾಣದ ಅನುಭವವನ್ನು ನೀಡುವ ಸಮರ್ಪಕ ವ್ಯವಸ್ಥೆಗೆ ನೀಡಲ್ಪಡುವ ಪ್ರಶಸ್ತಿ ಇದಾಗಿದ್ದು ವಿಮಾನಯಾನ ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ. ಮಂಗಳೂರು ವಿಮಾನ ನಿಲ್ದಾಣವು ಇಮಿಗ್ರೇಶನ್, ಕಸ್ಟಮ್ಸ್ ಮತ್ತು ಬ್ಯಾಗೇಜ್ ಹ್ಯಾಂಡ್ಲಿಂಗ್ ಸಿಸ್ಟಮ್‌ಗಳಲ್ಲಿ ಸುಧಾರಿತ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಪ್ರಯಾಣಿಕರಿಗೆ ಅತ್ಯುತ್ತಮ ಸೇವಾ ಸೌಲಭ್ಯಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ.

2025ರ ಸೆಪ್ಟೆಂಬರ್ 8 ರಿಂದ 11 ರ ತನಕ ಚೀನಾದ ಗುವಾಂಗ್‌ಝೌನಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಎಎಸ್‌ಕ್ಯೂ ಪ್ರಶಸ್ತಿ ಪ್ರದಾನ ನೆರವೇರಲಿದೆ. ಕರಾವಳಿಗರಿಗೂ ಇದೊಂದು ರೀತಿಯ ಹೆಮ್ಮೆಯ ವಿಚಾರವಾಗಿದೆ‌.

LEAVE A REPLY

Please enter your comment!
Please enter your name here