Home ತಾಜಾ ಸುದ್ದಿ ನರ್ಸಿಂಗ್ ಓದುತ್ತಿದ್ದ ಯುವತಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!!

ನರ್ಸಿಂಗ್ ಓದುತ್ತಿದ್ದ ಯುವತಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!!

0

ಬೆಳಗಾವಿ : ನರ್ಸಿಂಗ್ ಓದುತ್ತಿದ್ದ ಯುವತಿಯನ್ನು ಕಿಡ್ನ್ಯಾಪ್ ಮಾಡಿದ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾವಿಬ್ಬರು ಪ್ರೀತಿಸುತ್ತಿದ್ದು, ಸ್ವಇಚ್ಚೆಯಿಂದ ಇಬ್ಬರು ಓಡಿ ಹೋಗಿದ್ದೇವೆ ಎಂದು ಯುವಕ-ಯುವತಿ ಹೇಳಿದ್ದಾರೆ.

ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದು, ನಾನು ಯುವತಿಯನ್ನು ಕಿಡ್ನ್ಯಾಪ್ ಮಾಡಿರಲಿಲ್ಲ, ಇಬ್ಬರು ಪರಸ್ಪರ ಒಪ್ಪಿ ಓಡಿ ಹೋಗಿದ್ದೇವೆ ಎಂದು ಯುವಕ ಸದ್ರುದ್ದೀನ್ ಹೇಳಿದ್ದಾನೆ. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು, ಸ್ವಇಚ್ಚೆಯಿಂದ ಓಡಿ ಹೋಗಿದ್ದೇವೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಬಸ್ತವಾದ ಗ್ರಾಮದ ರಾಧಿಕಾ ಮುಚ್ಚಂಡಿ ಎಂಬ ಯುವತಿಯನ್ನು ಅನ್ಯಕೋಮಿನ ಯುವಕ ಸದ್ರುದ್ದೀನ್ ಕಿಡ್ನ್ಯಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು, ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾರೆ ಕೆಲಸ ಮಾಡ್ತಿದ್ದ ಸದ್ರುದಿನ್ ಬೇಪಾರಿ ಎಂಬಾತನ ವಿರುದ್ಧ ಯುವತಿ ಕುಟುಂಬದವರು ಅಪಹರಣದ ಆರೋಪ ಹೊರಿಸಲಾಗಿದ್ದು, 19 ದಿನಗಳ ಹಿಂದೆ ಹಿಂದೂ ಹುಡುಗಿಯನ್ನ ಸದ್ರುದಿನ್ ಎಂಬಾತ ಅಪಹರಿಸಿ ಕರೆದೊಯ್ದಿದ್ದಾನೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here