
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷರಾದ ಶ್ರೀಮತಿ ರೂಪಾ ಚೇತನ್ ರವರ ನೇತೃತ್ವದಲ್ಲಿ ಮಹಿಳಾ ಸಾಧಕಿಯರನ್ನು ಹಾಗೂ ಯುವ ಕಾಂಗ್ರೆಸ್ ನ ಚುನಾಯಿತ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.



ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ನಿಂದ ಈ ವರುಷದ ಮಹಿಳಾ ಸಾಧಕಿಯರಾಗಿ ಗುರುತಿಸಿ ಕೊಂಡವರು ಶ್ರೀಮತಿ ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ರವರು ವೃತ್ತಿಯಲ್ಲಿ ಖ್ಯಾತ ಪ್ರಸೂತಿ ತಜ್ಞೆ ಮತ್ತು ಸೌಂದರ್ಯ ವರ್ಧಕ ಸ್ತ್ರೀರೋಗ ತಜ್ಞ ರಾಗಿದ್ದು, ಎ.ಜೆ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ತಮ್ಮದೇ ಸ್ವಂತವಾದ ಕಾಸ್ಮೆಟಿಕ್ ಸೆಂಟರ್ ನ್ನು ನಡೆಸಿಕೊಂಡು ಜೊತೆಗೆ ಅಥೇನಾ ಆಸ್ಪತ್ರೆಯಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಲೇ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದು ಸಮಾಜದಲ್ಲಿ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಮಹಿಳಾ ಸಾಧಕಿಯಾಗಿ ಗುರುತಿಸಿಕೊಂಡು ಸನ್ಮಾನಿಸಲ್ಪಟ್ಟವರು ಕುಮಾರಿ ಪ್ರಾಪ್ತಿ ಜಯಪ್ರಕಾಶ್ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡು ಒಬ್ಬ ಹೆಣ್ಣು ಮಗಳಾಗಿ ಮೀನುಗಾರಿಕಾ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುತ್ತಾ ಆಳ ಸಮುದ್ರ ಮೀನುಗಾರಿಕೆಯಂತಹ ಸಾಹಸಮಯ ವೃತ್ತಿಯನ್ನು ಕೈ ಗೊಂಡು ಅದರಲ್ಲಿ ಯಶಸ್ವಿ ಸಾಧಿಸಿದ ಹೆಣ್ಣು ಮಗಳಾಗಿ ಸಮಾಜದಲ್ಲಿ ಇತರ ಹೆಣ್ಣು ಮಕ್ಕಳಿಗೆ ಮಾದರಿಯೆನಿಸಿದ್ದಾರೆ. ಮಹಿಳಾ ಸಾಧಕಿಯಾಗಿ ಗುರುತಿಸಿಕೊಂಡವರು ಶ್ರೀಮತಿ ಪ್ರತಿಭಾ ಸಾಲ್ಯಾನ್ ರವರು. ವೃತ್ತಿಯಲ್ಲಿ ಬ್ಯೂಟಿಶಿಯನ್ ಆದರೂ ಪ್ರವೃತ್ತಿಯಲ್ಲಿ ಕಲಾವಿದೆಯಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾರೆ. ಕೇಶದಾನಿಗಳು ತಮ್ಮ ಕೇಶವನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಸಂಧರ್ಭದಲ್ಲಿ ಉಚಿತವಾಗಿ ಕೇಶ ಕಟ್ ಮಾಡುವ ಮೂಲಕ ಮತ್ತು ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಮೇಕಪ್ ಮಾಡುವ ಮೂಲಕ ಬ್ಯೂಟಿಶಿಯನ್ ಕ್ಷೇತ್ರದಲ್ಲಿಯೂ ಸಮಾಜ ಸೇವೆಯನ್ನು ಮಾಡಬಹುದು ಎಂಬುದನ್ನು ಸಾಬೀತು ಮಾಡಿದವರು. ಈ ಮೂವರು ಮಹಿಳಾ ಸಾಧಕಿಯರನ್ನು ಗುರುತಿಸಿ ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಅದೇ ರೀತಿ NSUI ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಅಯೋರಾ ಟೆಲ್ಲಿಸ್,ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವೆಲ್ವಿನ್ ಜೇಸನ್ ಉಪಾಧ್ಯಕ್ಷರಾದ ಶ್ರೀ ಪೃಥ್ವಿ ಸಾಲಿಯಾನ್ , ಶ್ರೀ ಕ್ಲೈಡ್ ಡಿ ಸೋಜಾ ಹಾಗೂ ಶ್ರೀ ಶಾನ್ ಡಿ ಸೋಜಾ , ಕಾರ್ಯದರ್ಶಿ ಶ್ರೀ ಅಭಿಷೇಕ್ ರವರನ್ನು ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಶಾಲೆಟ್ ಪಿಂಟೋರವರು ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ನಾಯಕರೆಲ್ಲರೂ ಉಪಸ್ಥಿತರಿದ್ದು ಶುಭಕೋರಿದರು. ಅಧ್ಯಕ್ಷರಾದ ಶ್ರೀಮತಿ ರೂಪಾ ಚೇತನ್ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

