Home ತಾಜಾ ಸುದ್ದಿ ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ತರುವ ಅಂಶ ಪತ್ತೆ..!!

ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ತರುವ ಅಂಶ ಪತ್ತೆ..!!

0

ಬೆಂಗಳೂರು : ಇತ್ತೀಚೆಗೆ ಇಡ್ಲಿ ಬೇಯಿಸಲು ಉಪಯೋಗಿಸುವ ಪ್ಲಾಸ್ಟಿಕ್‌ ನಿಂದ ಮಾರಕ ರೋಗದ ಸಾಧ್ಯತೆಯ ಬಗೆಗಿನ ವರದಿಗಳ ಬೆನ್ನಲ್ಲೇ ಇದೀಗ ಹಸಿರು ಬಟಾಣಿಯಲ್ಲೂ ಕಲಬೆರಕೆ ಅಂಶ ಪತ್ತೆಯಾಗಿದ್ದು ಬ್ಯಾನ್‌ ಬಗ್ಗೆ ಊಹಾಪೋಹ ಶುರುವಾಗಿದೆ.

ಬಟಾಣಿಯಲ್ಲಿ ಕೃತಕ ಕಲಬೆರಕೆ ಅಂಶ ಪತ್ತೆಯಾಗಿದೆ. ಪ್ರಾಥಮಿಕ ಲ್ಯಾಬ್ ವರದಿಯಲ್ಲಿ ಸ್ಫೋಟಕ ಅಂಶ ಬಯಲಾಗಿದೆ ಎನ್ನಲಾಗಿದೆ. ಬ್ರಿಲಿಯಂಟ್​ ಬ್ಲೂ, ಟೆಟಾರ್ಜಿನ್ ಅಂದ್ರೆ ಹಳದಿ ಬಣ್ಣವಿರುವ ರಾಸಾಯನಿಕ ಇರುವುದು ಪತ್ತೆಯಾಗಿದೆ. ಬಟಾಣಿಯಲ್ಲೂ ಕ್ಯಾನ್ಸರ್ ತರುವ ಅಂಶ ಬೆಳಕಿಗೆ ಬಂದಿದೆ ಎಂದು ವರದಿ ಹೇಳಿದೆ. ಈಗಾಗಲೇ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್​ ಕಲರ್​ ಬಳಕೆ ನಿಷೇಧದ ಬಗ್ಗೆ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತದನಂತರ ಮತ್ತೊಂದು ಸುತ್ತಿನ ಪರೀಕ್ಷೆ ಬಳಿಕ ಬಟಾಣಿಗೆ ಬಣ್ಣ ಬಳಕೆ ಬ್ಯಾನ್‌ಗೆ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಕರಿದ ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ್ರೂ ಎಲ್ಲೆಡೆ ಕಲರ್​ಫುಲ್ ಬಟಾಣಿ ಮಾರಾಟ ಮಾತ್ರ ನಿಂತಿಲ್ಲ. ಒಟ್ಟಾರೆ ಬಾಯಿರುಚಿಗೆ ಸೈಡ್ಸ್‌ಗೆ ಬಳಸುತ್ತಿದ್ದ ಗ್ರೀನ್‌ ಪೀಸ್‌ ಸಂಪೂರ್ಣ ಬ್ಯಾನ್‌ ಆಗುತ್ತಾ ಇಲ್ಲ ಮ್ಯಾಗಿ ತರಹ ಮತ್ತೆ ಹುಟ್ಟಿ ಬರುತ್ತಾ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here