
ಉಡುಪಿ: ಬ್ಯಾಂಕ್ ಗ್ರಾಹಕರೊಬ್ಬರ ಮೊಬೈಲ್ ಸoಖ್ಯೆಗೆ ಒಟಿಪಿ ಕಳುಹಿಸಿದ ವಂಚಕರು, ಅವರ ಖಾತೆಯಿಂದ 1.79 ಲಕ್ಷ ರೂ. ದೋಚಿರುವ ಘಟನೆ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



ಉಡುಪಿಯ ಬೈರಂಪಳ್ಳಿ ನಿವಾಸಿ ಗೋಪಾಲ್(54) ಎಂಬುವರ ಮೊಬೈಲ್‌ಗೆ ಅಪರಿಚಿತರು ಒಟಿಪಿ ಕಳುಹಿಸುತ್ತಿದ್ದರು. ಅವರು ಆ ಮೆಸೇಜ್ ಡಿಲೀಟ್ ಮಾಡುತ್ತಿದ್ದರು. ಮಾ.7ರಂದು ಬೆಳಗ್ಗೆ ಮತ್ತೆ 23 ಬಾರಿ ಒಟಿಪಿ ಬಂದಿದ್ದು, ಮಧ್ಯಾಹ್ನ 1ಕ್ಕೆ ಅವರ ಬ್ಯಾಂಕ್ ಖಾತೆಯಿಂದ 1.79 ಲಕ್ಷ ರೂ. ಕಡಿತವಾಗಿರುವ ಮೆಸೇಜ್ ಬಂದಿದೆ.


ಕೂಡಲೇ ಗೋಪಾಲ್ ಅವರು ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ, ವಂಚಕರು ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದು ಪತ್ತೆಯಾಗಿದೆ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.