Home ತಾಜಾ ಸುದ್ದಿ ರಾಜ್ಯದಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಏಕರೂಪದ ಟಿಕೆಟ್‌ ದರ..!

ರಾಜ್ಯದಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಏಕರೂಪದ ಟಿಕೆಟ್‌ ದರ..!

0

ಬೆಂಗಳೂರು: ಮಲ್ಟಿಪ್ಲೆಕ್ಸ್ ಗಳು ಸಿನಿಮಾ ಟಿಕೆಟ್‌ಗೆ ದುಬಾರಿ ದರ ನಿಗದಿ ಮಾಡಿ ಜನರಿಂದ ಹಣ ಸುಲಿಗೆ ಮಾಡುತ್ತಿವೆ. ಇದನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಏಕರೂಪದ ಟಿಕೆಟ್‌ ದರ ನಿಗದಿ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಗುರುವಾರ ಜೆಡಿಎಸ್‌ನ ಗೋವಿಂದರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಟಿಕೆಟ್‌ ದರಗಳನ್ನು ನಿಗದಿ ಮಾಡುವ ಅಧಿಕಾರವನ್ನು ಚಿತ್ರಮಂದಿರಗಳ ಮಾಲೀಕರಿಗೆ ನೀಡಲಾಗಿದೆ. ದರವನ್ನು ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೂ ಇದ್ದು, ಅಗತ್ಯವೆನಿಸಿದರೆ ಅದನ್ನು ಬಳಸಬಹುದು ಎಂದಿದ್ದಾರೆ.

2017-18ನೇ ಸಾಲಿನ ಆಯವ್ಯಯದಲ್ಲಿ ಎಲ್ಲಾ ಚಿತ್ರಮಂದಿರಗಳನ್ನು ಏಕ ರೂಪದ ದರ ಜಾರಿ ಮಾಡಲು ಘೋಷಣೆ ಮಾಡಲಾಗಿತ್ತು. ಆಯವ್ಯಯದ ಘೋಷಣೆಯಂತೆ 2018, ಮೇ 11ರಂದು ಸರ್ಕಾರದ ಆದೇಶವೂ ಸಹ ಆಗಿತ್ತು. ಆದರೆ ಆ ಸರ್ಕಾರಿ ಆದೇಶಕ್ಕೆ ತಡೆಯಾಜ್ಞೆ ತಂದ ನಿಟ್ಟಿನಲ್ಲಿ ಆದೇಶವನ್ನು ವಾಪಸ್ಸು ತೆಗೆದುಕೊಳ್ಳಲಾಯಿತು. ಚಿತ್ರಮಂದಿರಗಳ ಟಿಕೇಟ್ ದರಗಳನ್ನು ಚಿತ್ರಮಂದಿರಗಳ ಮಾಲೀಕರೇ ನಿರ್ಧಾರ ಮಾಡುವ ಪದ್ದತಿ ಜಾರಿಯಲ್ಲಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿಗಳ ಮಾಲಿಕರು ಚಿತ್ರಮಂದಿಗಳನ್ನು ವಾಣಿಜ್ಯೋದ್ಯಮವಾಗಿ ರೂಪಿಸಿಕೊಂಡಿದ್ದಾರೆ. ಆವಶ್ಯವೆನಿಸಿದಲ್ಲಿ ದರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಈ ಸಂಬಂಧ ಕೂಡಲೇ ಅಗತ್ಯ ನಿಯಮಗಳನ್ನು ರೂಪಿಸಿ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿ ಮಾಡಲು ಆದಷ್ಟು ಬೇಗ ಕ್ರಮ ವಹಿಸಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

100 ರಿಂದ 150 ಆಸನಗಳಿರುವ ಮಲ್ಟಿಪ್ಲೆಕ್ಸ್‌ಗಳು ಟಿಕೆಟ್‌ ಮಾತ್ರವಲ್ಲದೆ, ನೀರು ಮತ್ತು ತಿನಿಸುಗಳಿಗೂ ವಿಪರೀತ ದರ ನಿಗದಿ ಮಾಡುತ್ತಿವೆ. ಇದನ್ನೂ ನಿಯಂತ್ರಿಸುವ ಅವಶ್ಯ ಇದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here