
ಮೂಡುಬಿದಿರೆ : ಚಿನ್ನಾಭರಣ ಮಳಿಗೆಯೊಂದರಿಂದ ಎರಡು ಉಂಗುರಗಳನ್ನು ಕದ್ದ ಆರೋಪಿ ಗುರುವಾಯನ ಕೆರೆಯ ರಮೇಶನನ್ನು ಸಾರ್ವಜನಿಕರು ಹಿಡಿದು ಮನಸೋ ಇಚ್ಛೆ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಸಂಭವಿಸಿದೆ
ಅಲಂಕಾರ್ ಜ್ಯುವೆಲ್ಲರ್ಗೆ ಗ್ರಾಹಕನಂತೆ ಪ್ರವೇಶಿಸಿದ ರಮೇಶ ನಡೆಸಿದ ಕೃತ್ಯ ಇನ್ನೊಬ್ಬ ಗ್ರಾಹಕರ ಗಮನಕ್ಕೆ ಬಂದು, ರಮೇಶ ಹೊರಗೆ ಹೋದ ತಕ್ಷಣ ಅಂಗಡಿಯವರಿಗೆ ಮಾಹಿತಿ ನೀಡಿದರು. ರಮೇಶನನ್ನು ಬೆನ್ನತ್ತಿದ ಮಳಿಗೆಯ ಸಿಬಂದಿ ಕಲ್ವೆ ಕಲ್ವೆ ಎಂದು ಬೊಬ್ಬೆ ಹಾಕಿದಾಗ ಸಾರ್ವಜನಿಕರು ರಮೇಶನನ್ನು ಬೆಂಬತ್ತಿ ಹಿಡಿದರು.
ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.