Home ಕರಾವಳಿ ಬ್ರಹ್ಮಕಲಶಕ್ಕೆ ಶುಭಕೋರಿದ ಬ್ಯಾನರ್ ಹರಿದ ಕಿಡಿಗೇಡಿಗಳು ಅರೆಸ್ಟ್..!

ಬ್ರಹ್ಮಕಲಶಕ್ಕೆ ಶುಭಕೋರಿದ ಬ್ಯಾನರ್ ಹರಿದ ಕಿಡಿಗೇಡಿಗಳು ಅರೆಸ್ಟ್..!

0

ಮೂಡುಬಿದಿರೆ: ಲಾಡಿ ಶ್ರೀಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಅಳವಡಿಸಿರುವ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾನಿಗೈದ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಹೊಟೇಲ್ ಕಾರ್ಮಿಕರಾದ ಮಹಮ್ಮದ್ ಕಾಮ್ದು ಝಮಾನ್ ಮತ್ತು ಜಾರ್ಖಾಂಡ್‌ನ ಮಹಮ್ಮದ್ ಸಿರಾಜ್ ಅನ್ಸಾರಿ ಬಂಧಿತ ಆರೋಪಿಗಳು. ಮೂಡುಬಿದಿರೆ ಪುರಸಭಾ ಸದಸ್ಯ ಇಟ್ಬಾಲ್ ಕರೀಂ ಲಾಡಿ ಶ್ರೀಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಹಾಕಿರುವ ಬ್ಯಾನರ್ ಅನ್ನು ಹರಿದು ಹಾನಿಗೊಳಿಸಲಾಗಿತ್ತು.

ಈ ಬಗ್ಗೆ ಮೂಡುಬಿದಿರೆ ಪೊಲೀಸ್‌ ಠಾಣೆಗೆ ಕರೀಂ ಅವರು ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿ ತಕ್ಷಣ ಮೂಡುಬಿದಿರೆ ಪೊಲೀಸರು ಬಿಹಾರ ಮೂಲದ ಹೊಟೇಲ್ ಕಾರ್ಮಿಕರಾದ ಮಹಮ್ಮದ್ ಕಾಮ್ದು ಝಮಾನ್ ಮತ್ತು ಜಾರ್ಖಾಂಡ್‌ನ ಮಹಮ್ಮದ್ ಸಿರಾಜ್ ಅನ್ಸಾರಿ ಎಂಬವರನ್ನು ಬಂಧಿಸಿದ್ದಾರೆ. ದೂರು ದಾಖಲಾದ ಒಂದು ಗಂಟೆಯೊಳಗೆ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here