Home ಉಡುಪಿ ‘ಸುವರ್ಣ ಗೃಹಮಂತ್ರಿ’ಯ ಹೊಸ ಸೀಸನ್ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಖ್ಯಾತ ನಿರೂಪಕಿ ಶಾಲಿನಿ..!

‘ಸುವರ್ಣ ಗೃಹಮಂತ್ರಿ’ಯ ಹೊಸ ಸೀಸನ್ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಖ್ಯಾತ ನಿರೂಪಕಿ ಶಾಲಿನಿ..!

0

ಕನ್ನಡಿಗರ ಹೆಮ್ಮೆಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸುವರ್ಣ ಗೃಹಮಂತ್ರಿ’ ಎಂಬ ಫ್ಯಾಮಿಲಿ ರಿಯಾಲಿಟಿ ಶೋ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇನ್ಮುಂದೆ ಹೊಸ ಸೀಸನ್ ಮೂಲಕ ಮತ್ತಷ್ಟು ಮನರಂಜನೆಯ ಮೆರುಗು ನೀಡಲು ಸಜ್ಜಾಗಿದೆ ‘ಸುವರ್ಣ ಗೃಹಮಂತ್ರಿ ಸೀಸನ್ 2’.

ಈ ಹಿಂದೆ ಸಾವಿರಕ್ಕೂ ಹೆಚ್ಚು ಸಂಚಿಕೆಗಳೊಂದಿಗೆ ಪ್ರಸಾರವಾಗಿದ್ದ’ಸುವರ್ಣ ಸೂಪರ್ ಸ್ಟಾರ್’ ಕಾರ್ಯಕ್ರಮದ ಮೂಲಕ ಕರ್ನಾಟಕದಾದ್ಯಂತ ಮನೆಮಾತಾಗಿದ್ದ ನಟಿ, ನಿರೂಪಕಿ ಶಾಲಿನಿ ಇದೀಗ ಮತ್ತೆ ಸುವರ್ಣ ವಾಹಿನಿಗೆ ಕಮ್ ಬ್ಯಾಕ್ ಆಗಿದ್ದು ಇನ್ಮುಂದೆ ‘ಸುವರ್ಣ ಗೃಹಮಂತ್ರಿ’ಯ ನಿರೂಪಣೆಯ ಜವಾಬ್ದಾರಿಯನ್ನು ಹೊರಲಿದ್ದಾರೆ. ನಿಮ್ಮ ಮನೆಮಗಳು ಶಾಲಿನಿ ಮತ್ತೆ ನಿಮ್ಮ ಮನೆ ಮನೆಗೆ ಬರ್ತಿದ್ದಾರೆ.

ಸುವರ್ಣ ಗೃಹಮಂತ್ರಿ ‘ಸೀಸನ್ 2’ ಪ್ರೋಮೋದಲ್ಲಿ ಶಾಲಿನಿಯನ್ನು ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತ ಪಡಿಸುತ್ತಿದ್ದು,’ಸುವರ್ಣ ಗೃಹಮಂತ್ರಿ ಸೀಸನ್ 2’ನ ಸಂಚಿಕೆ ನೋಡಲು ಉತ್ಸುಕದಿಂದ ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿ, ಅತ್ತೆ- ಸೊಸೆ ಅನ್ಯೋನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಸೀರೆ ಹಾಗು ಮತ್ತಷ್ಟು ಆಕರ್ಷಕ ಉಡುಗೊರೆಗಳನ್ನು ನೀಡುವುದೇ ‘ಸುವರ್ಣ ಗೃಹಮಂತ್ರಿ ಸೀಸನ್ 2’ ಕಾರ್ಯಕ್ರಮದ ಶೈಲಿಯಾಗಿದೆ. ಜೊತೆಗೆ ಈ ಹೊಸ ಸೀಸನ್ ಮತ್ತಷ್ಟು ಹೊಸಬಗೆಯ ಸುತ್ತುಗಳನ್ನು ಒಳಗೊಂಡಿರುತ್ತದೆ.

ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಇನ್ಮುಂದೆ ನಿಮ್ಮ ನೆಚ್ಚಿನ ಮನೆಮಗಳು ಶಾಲಿನಿ ಅವರು ಅಕ್ಕನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆಯ ಬಾಗಿನವನ್ನು ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ. ನಿಮಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುವರ್ಣಾವಕಾಶವಿದೆ. ಭಾಗವಹಿಸಲು ನೀವು ಇಚ್ಛಿಸಿದ್ದಲ್ಲಿ 9901715845 ಈ ನಂಬರ್ ಗೆ ಮೆಸೇಜ್ ಮಾಡಿ.

ಶುರುವಾಗ್ತಿದೆ ‘ಸುವರ್ಣ ಗೃಹಮಂತ್ರಿ ಸೀಸನ್ 2’ ಇದೇ ಸೋಮವಾರದಿಂದ ಪ್ರತಿದಿನ ಸಂಜೆ 5 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.

LEAVE A REPLY

Please enter your comment!
Please enter your name here