
ಬಂಟ್ವಾಳ: ಕನ್ಯಾನ-ಕುಳಾಲು-ಸಾಲೆತ್ತೂರು ಸಂಪರ್ಕದ ಕಳೆಂಜಿಮಲೆ ರಕ್ಷಿತಾರಣ್ಯದ ಒಳರಸ್ತೆಯಲ್ಲಿ ಕೋಳಿ ಸಾಗಾಟದ ತಮಿಳುನಾಡು ನೋಂದಣಿಯ ಪಿಕಪ್ ಟೆಂಪೋ ಪಲ್ಟಿಯಾಗಿದೆ.



ವಾಹನದ ಚಾಲಕ ಅದೃಷ್ಟವಶಾತ್ ಪಾರಾಗಿರುವ ಘಟನೆ ನಡೆದಿದೆ. ನೂರಾರು ಕೋಳಿಗಳ ಸಾವು.


ಕನ್ಯಾನ ಜಂಕ್ಷನಿಂದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಾದುಹೋಗುವ ತೀರಾ ಕಡಿದಾದ ಏರು ರಸ್ತೆಯಲ್ಲಿ ಮುಂದಿನಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಕೋಳಿ ಸಾಗಾಟದ ಪಿಕಪ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕ್ರೇನ್ ಮೂಲಕ ವಾಹನವನ್ನು ಮೇಲಕ್ಕೆತ್ತಲಾಗಿದೆ.