Home ತಾಜಾ ಸುದ್ದಿ ಅಯೋಧ್ಯೆಯ ರಾಮ ಮಂದಿರದ ಮೊದಲ ಇಟ್ಟಿಗೆ ಇಟ್ಟಿದ್ದ ಕಾಮೇಶ್ವರ ಚೌಪಾಲ್ ಇನ್ನಿಲ್ಲ

ಅಯೋಧ್ಯೆಯ ರಾಮ ಮಂದಿರದ ಮೊದಲ ಇಟ್ಟಿಗೆ ಇಟ್ಟಿದ್ದ ಕಾಮೇಶ್ವರ ಚೌಪಾಲ್ ಇನ್ನಿಲ್ಲ

0

ಅಯೋಧ್ಯೆಯಲ್ಲಿ ರಾಮ ಮಂದಿರದ ಮೊದಲ ಇಟ್ಟಿಗೆಯನ್ನು ಹಾಕಿದ ಕಾಮೇಶ್ವರ ಚೌಪಾಲ್ (68) ನಿಧನರಾದರು. ಅವರು ಬಿಹಾರ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಟ್ಟಿದ್ದ ವಿಶ್ವ ಹಿಂದೂ ಪರಿಷತ್ ನಾಯಕ 68ವರ್ಷ ದ ಕಾಮೇಶ್ವರ್ ಚೌಪಾಲ್ ಶುಕ್ರವಾರ ನಿಧನರಾಗಿದ್ದಾರೆ. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಚೌಪಾಲ್ ಅವರನ್ನು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಕಾಮೇಶ್ವರ ಚೌಪಾಲ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಹಿರಿಯ ಬಿಜೆಪಿ ನಾಯಕ ಮತ್ತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಕಾಮೇಶ್ವರ ಚೌಪಾಲ್ ಜಿ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅವರು ರಾಮನ ಕಟ್ಟಾ ಭಕ್ತರಾಗಿದ್ದರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಿದರು. ದಲಿತ ಹಿನ್ನೆಲೆಯಿಂದ ಬಂದ ಕಾಮೇಶ್ವರ್ ಜಿ ಅವರು ಸಮಾಜದ ವಂಚಿತ ಸಮುದಾಯಗಳ ಕಲ್ಯಾಣಕ್ಕಾಗಿ ಮಾಡಿದ ಕೆಲಸಕ್ಕಾಗಿ ಯಾವಾಗಲೂ ಸ್ಮರಣೀಯರು. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ನನ್ನ ಸಂತಾಪಗಳು. ಓಂ ಶಾಂತಿ!

LEAVE A REPLY

Please enter your comment!
Please enter your name here