ಚಳಿ ಮತ್ತು ಬೇಸಿಗೆಕಾಲದಲ್ಲಿ ಹೆಚ್ಚಿನವರಿಗೆ ಒಣ ಕೆಮ್ಮಿನ ಸಮಸ್ಯೆ ಕಂಡು ಬರುತ್ತದೆ. ದೂಳಿನ ಅಲರ್ಜಿ ಇರುವವರೆಗೆ ಈ ರೀತಿಯ ಕೆಮ್ಮು ಕಂಡು ಬರುತ್ತದೆ. ಒಣ ಕೆಮ್ಮು ಕಾಣಿಸಿದರೆ ಕಫ ಸಮಸ್ಯೆ ಇರುವುದಿಲ್ಲ, ಆದರೆ ಗಂಟಲಿನಲ್ಲಿ ಕೆರೆತ ಮತ್ತು ನಿರಂತರ ಕೆಮ್ಮು ಕಂಡು ಬರುವುದು, ಕೆಲವರಿಗೆ 2 ತಿಂಗಳವರೆಗೆ ಈ ರೀತಿಯ ಕೆಮ್ಮು ಕಂಡು ಬರುವುದು.



ಇಂತವರು ದೂಳಿನಿಂದ ದೂರವಿರುವುದರ ಮುಖಾಂತರ ಹಾಗೂ ಕೆಲ ಮನೆ ಮದ್ದುಗಳನ್ನು ಪಾಲಿಸುವುದರಿಂದ ಬರದಂತೆ ತಡೆಯಬಹುದು. ಒಣಕೆಮ್ಮನ್ನು ತಡೆಯುವ ಸರಳವಾದ ಮನೆ ಮದ್ದುಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:


ನೀರು ಕುಡಿಯಿರಿ
ಒಣ ಕೆಮ್ಮು ಕಾಣಿಸಿದಾಗ ಆಗಾಗ ಸ್ವಲ್ಪ-ಸ್ವಲ್ಪ ನೀರು ಕುಡಿಯಿರಿ. ಹೀಗೆ ಮಾಡಿದರೆ ಕೆಮ್ಮು ಬರುವುದನ್ನು ತಡೆಯಬಹುದು. ಗಂಟಲು ಒಣಗಲು ಬಿಡಬೇಡಿ. ಆಗಾಗ ನೀರನ್ನು ಕುಡಿಯುತ್ತಿದ್ದರೆ ಕ್ರಮೇಣ ಒಣ ಕೆಮ್ಮು ಕಮ್ಮಿಯಾಗುವುದು. ಇದರ ಜೊತೆಗೆ ಮುಂದಿನ ಸ್ಲೈಡ್ ನಲ್ಲಿ ಹೇಳಿದ ಮನೆ ಮದ್ದುಗಳನ್ನು ಪಾಲಿಸಿ
ಐಸ್ ಕ್ಯಾಂಡಿ
ಒಣ ಕೆಮ್ಮನ್ನು ಕಮ್ಮಿ ಮಾಡುವಲ್ಲಿ ಐಸ್ ಕ್ಯಾಂಡಿ ಕೂಡ ತುಂಬಾ ಸಹಾಯಕಾರಿಯಾಗಿದೆ. ಕ್ಯಾಂಡಿ ಗಂಟಲನ್ನು ತಂಪು ಮಾಡಿ, ಕೆಮ್ಮು ಬರುವುದನ್ನು ತಡೆಯುತ್ತದೆ.
ಹರ್ಬಲ್ ಟೀ
ಒಣ ಕೆಮ್ಮು ಹೋಗಲಾಡಿಸಲು ಕೆಲವೊಂದು ಹರ್ಬಲ್ ಟೀ ತುಂಬಾ ಸಹಾಯಕಾರಿ. ಶುಂಠಿ, ತುಳಸಿ ಈ ಅಂಶಗಳಿರುವ ಹರ್ಬಲ್ ಟೀ ತುಂಬಾ ಒಳ್ಳೆಯದು.
ನಿಂಬೆ ಪಾನೀಯ
ನಿಂಬೆ ಪಾನೀಯ ಮಾಡಿ ದಿನದಲ್ಲಿ 3-4 ಲೋಟ ಕುಡಿಯಿರಿ. ಈ ನಿಂಬೆ ಜ್ಯೂಸ್ ನಲ್ಲಿ ವಿಟಮಿನ್ ಸಿ ಅಧಿಕವಿದ್ದು ಒಣ ಕೆಮ್ಮಿನ ಸಮಸ್ಯೆಗೆ ಉತ್ತಮವಾದ ಮನೆಮದ್ದಾಗಿದೆ.
ಶುಂಠಿ
ಶುಂಠಿ ಕಷಾಯ ಮಾಡಿ ಕುಡಿಯುವುದು ಅಥವಾ ಶುಂಠಿ ರಸಕ್ಕೆ ಸ್ವಲ್ಪ ಜೇನು ಬೆರೆಸಿ ಸೇವಿಸುವುದು ಮಾಡುತ್ತಾ ಬಂದರೆ ಒಣ ಕೆಮ್ಮು ದೂರವಾಗುವುದು.
ಉಪ್ಪು
ಉಪ್ಪನ್ನು ಬಿಸಿ ನೀರಿಗೆ ಹಾಕಿ ಮುಕ್ಕಳಿಸಿದರೆ ಗಂಟಲಿನ ಕೆರೆತ ಕಡಿಮೆಯಾಗುವುದು. ಅಲ್ಲದೆ ಈ ರೀತಿ ಮಾಡುವುದರಿಂದ ಗಂಟಲಿನ ನೋವನ್ನು ಕಡಿಮೆಯಾಗುವುದು.
ಚಕ್ಕೆ
ಚಕ್ಕೆಯನ್ನು ನೀರಿನಲ್ಲಿ ನೆನೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿದರೆ ಒಣ ಕೆಮ್ಮು ಕಡಿಮೆಯಾಗುವುದು.