Home ಕರಾವಳಿ ಮಂಗಳೂರು: ಫೆ.8ಕ್ಕೆ ಕುಪ್ಪೆಪದವಿನಲ್ಲಿ ಹೊಸ ಉಪ ಅಂಚೆ ಕಚೇರಿ- ಇನ್ಮುಂದೆ ಹೊಸ ಪಿನ್‌ಕೋಡ್

ಮಂಗಳೂರು: ಫೆ.8ಕ್ಕೆ ಕುಪ್ಪೆಪದವಿನಲ್ಲಿ ಹೊಸ ಉಪ ಅಂಚೆ ಕಚೇರಿ- ಇನ್ಮುಂದೆ ಹೊಸ ಪಿನ್‌ಕೋಡ್

0

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಪ್ಪೆಪದವಿನಲ್ಲಿ ಫೆ.8ರಂದು ಹೊಸ ಅಂಚೆ ಕಚೇರಿ ಉದ್ಘಾಟನೆಗೊಳ್ಳಲಿದ್ದು, ಆ ಬಳಿಕ ಹೊಸ ಪಿನ್‌ಕೋಡ್ ಆಗಿ 574162 ಆಗಿರುತ್ತದೆ ಎಂದು ಮಂಗಳೂರು ಅಂಚೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅಂಚೆ ಇಲಾಖೆ, “ಈ ಮೊದಲು ಕುಪ್ಪೆಪದವು, ಇರುವೈಲು, ಕೊಳವೂರು ಪ್ರದೇಶಗಳು ಗಂಜಿಮಠ ಅಂಚೆ ಕಚೇರಿಯ ಬಟವಾಡೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿಯ ಪಿನ್ ಕೋಡ್ 574144 ಆಗಿತ್ತು. ಕುಪ್ಪೆಪದವಿನಲ್ಲಿ ನೂತನ ಉಪ ಅಂಚೆ ಕಚೇರಿಯು ಫೆ.8ರಿಂದ ಕಾರ್ಯಾರಂಭಗೊಳ್ಳಲಿದೆ” ಎಂದು ತಿಳಿಸಿದೆ.

“ಇರುವೈಲು ಮತ್ತು ಕೊಳವೂರು ಶಾಖಾ ಅಂಚೆ ಕಚೇರಿ ವ್ಯಾಪ್ತಿಗೆ ಒಳಪಡುವ ಎಲ್ಲ ಪ್ರದೇಶಗಳು ಮತ್ತು ಕುಪ್ಪೆಪದವು ಶಾಖಾ ಅಂಚೆ ಕಚೇರಿಗೆ ಒಳಪಡುವ ಎಲ್ಲ ಪ್ರದೇಶಗಳಿಗೆ ಇನ್ನು ಮುಂದೆ ಹೊಸ ಪಿನ್ ಕೋಡ್ 574162 ಆಗಿರುತ್ತದೆ. ಈ ಪ್ರದೇಶಗಳಿಗೆ ಇನ್ನು ಮುಂದೆ ಬಟವಾಡೆಯು ಕುಪ್ಪೆಪದವು ಉಪ ಅಂಚೆ ಕಚೇರಿಯಿಂದ ನಡೆಯಲಿದೆ” ಎಂದು ಅಂಚೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇರುವೈಲು ಮತ್ತು ಕೊಳವೂರು ಶಾಖಾ ಅಂಚೆ ಕಚೇರಿ ವ್ಯಾಪ್ತಿಗೆ ಒಳಪಟ್ಟು ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಬ್ಯಾಂಕ್‌ಗಳು, ಸರಕಾರಿ ಕಚೇರಿಗಳು, ಸಹಕಾರಿ ಸಂಸ್ಥೆಗಳು, ಖಾಸಗಿ ಕಚೇರಿಗಳು, ಕಂಪನಿಗಳು ಈ ಪಿನ್ ಕೋಡ್ ಬದಲಾವಣೆಯನ್ನು ಗಣನೆಗೆ ತೆಗೆದು ಕೊಂಡು ತಮ್ಮ ಎಲ್ಲ ಪತ್ರ ವ್ಯವಹಾರಗಳಿಗೆ ಇನ್ನು ಮುಂದೆ ಕುಪ್ಪೆಪದವು ಅಂಚೆ ಕಚೇರಿಯ ನೂತನ ಪಿನ್‌ಕೋಡ್ 574162ನ್ನು ನಮೂದಿಸಬೇಕು. ಈ ಬದಲಾವಣೆಯನ್ನು ಸಾರ್ವಜನಿಕರು ಕೂಡ ಗಮನಿಸಬೇಕು ಎಂದು ಮಂಗಳೂರು ಅಂಚೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here