Home ತಾಜಾ ಸುದ್ದಿ ತಲೆಮರೆಸಿಕೊಂಡಿದ್ದ ಏಕೈಕ ನಕ್ಸಲ್ ಶರಣಾಗತಿ

ತಲೆಮರೆಸಿಕೊಂಡಿದ್ದ ಏಕೈಕ ನಕ್ಸಲ್ ಶರಣಾಗತಿ

0

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಮುಂದೆ 6 ನಕ್ಸಲರು ಶರಣಾಗಿದ್ದರು. ಇದೀಗ ಮತ್ತೋರ್ವ ನಕ್ಸಲ್ ಶರಣಾಗತನಾಗಿದ್ದಾರೆ.

ಹಲವು ವರ್ಷಗಳಿಂದ ಭೂಗತನಾಗಿದ್ದ ನಕ್ಸಲ್ ರವೀಂದ್ರ ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ ಪಿ ವಿಕ್ರಂ ಆಮ್ಟೆ ಎದುರು ಶರಣಾಗಿದ್ದಾರೆ.

ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ನಿವಾಸಿಯಾಗಿರುವ ರವೀಂದ್ರ ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ನಕ್ಸಲ್ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಬಳಿಕ ನಾಪತ್ತೆಯಾಗಿದ್ದ. ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತ ಕಮಿಟಿ ಹರಸಾಹಸಪಟ್ಟಿತ್ತು. ಇದೀಗ ರಾಜ್ಯ ಸರ್ಲಾರದ ಮುಂದೆ ರವೀಂದ್ರ ಶರಣಾಗಿದ್ದು, ಸರ್ಕಾರದ ಪ್ಯಾಕೇಜ್ ಒಪ್ಪಿ ಶರಣಾಗತನಾಗಿದ್ದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here