Home ಕರಾವಳಿ ವಿಟ್ಲ: ನ್ಯಾಯಾಂಗ ನಿಂದನೆ – ದ. ಕ.ಜಿಲ್ಲಾಧಿಕಾರಿಗೆ ನೋಟಿಸ್‌

ವಿಟ್ಲ: ನ್ಯಾಯಾಂಗ ನಿಂದನೆ – ದ. ಕ.ಜಿಲ್ಲಾಧಿಕಾರಿಗೆ ನೋಟಿಸ್‌

0

ವಿಟ್ಲ: ಬಂಟ್ವಾಳ ಸಿವಿಲ್ ನ್ಯಾಯಾಲಯ ದ. ಕ.ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಿದೆ.

ವಿಟ್ಲ ಅಪ್ಪೇರಿಪಾದೆಯಲ್ಲಿ ಹೊನ್ನಮ್ಮ ಅವರು 1994ರಲ್ಲಿ ಸರಕಾರದ ವಿರುದ್ಧ ವ್ಯಾಜ್ಯ ದಾಖಲಿಸಿ ಕಸಬಾ ಗ್ರಾಮದ 4.12 ಎಕ್ಕರೆ ಜಮೀನನ್ನು ಬಲವಂತದಿಂದ ಒಕ್ಕಲೆಬ್ಬಿಸದಂತೆಯೂ ಈ ಜಮೀನಿನ ಬಗ್ಗೆ ಯಾವುದೇ ದಾಖಲೆಗಳನ್ನು ಮಾಡದಂತೆ ಶಾಶ್ವತ ಪ್ರತಿಬಂಧಕಾಜ್ಞೆ ಆದೇಶ ಪಡೆದುಕೊಂಡಿದ್ದರು.

ಈ ಆದೇಶವನ್ನು ಉಲ್ಲಂಘಿಸಿ 2024 ಆ. 16ರಂದು 1.88 ಎಕ್ರೆ ಜಮೀನನ್ನು ಸರಕಾರದ ಅಧಿಸೂಚನೆಯಂತೆ ಎಫ್.ಎಸ್.ಟಿ.ಪಿ. ಪ್ಲಾಂಟ್ ನಿರ್ಮಿಸಲು ಕಾದಿರಿಸಿ ವಿಟ್ಲ ಪಟ್ಟಣ ಪಂಚಾಯತ್‌ಗೆ ಹಸ್ತಾಂತರಿಸಲಾಗಿತ್ತು.

ಇದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಎಂದು ಮೃತ ಹೊನ್ನಮ್ಮ ಅವರ ವಾರಸುದಾರರಾದ ವೆಂಕಪ್ಪ ನಾಯ್ಕ ಡಿಸಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಡಿಸಿಗೆ ನೋಟಿಸ್‌ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here