Home ತಾಜಾ ಸುದ್ದಿ ಫೈನಾನ್ಸ್ ಸಾಲಗಾರರ ಕಿರುಕುಳ: ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಫೈನಾನ್ಸ್ ಸಾಲಗಾರರ ಕಿರುಕುಳ: ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

0

ಫೈನಾನ್ಸ್ ಸಾಲಕೊಟ್ಟವರ ಕಾಟಕ್ಕೆ ನೊಂದ ವ್ಯಕ್ತಿಯೊಬ್ಬರು  ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗದಲ್ಲಿ ನಡೆದಿದೆ.

ಇಲ್ಲಿನ ಮಾರುತಿ ನಗರದಲ್ಲಿ ಈ ಘಟನೆ ನಡೆದಿದೆ. ರಫಿಕ್ ಬಾಬುಸಾಬ್ (38) ಆತ್ಮಹತ್ಯೆ ಮಾಡಿಕೊಂಡವರು.

ರಫಿಕ್ ಸಾಲ ಮಾಡಿ ಬೊಲೆರೋ ವಾಹನ ಖರೀದಿಸಿದ್ದರು. ವಾರದ ರೀತಿಯಲ್ಲಿ ಬಡ್ಡಿ ತೀರಿಸುವುದಾಗಿ ಹೇಳಿದ್ದರು. ಸಾಲಗಾರರ ಕಿರುಕುಳ ಹೆಚ್ಚುತ್ತಿದ್ದಂತೆ ತಾವು ಖರೀದಿಸಿದ್ದ ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here