ಮಂಗಳೂರು: ನಗರದ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಬಳಿಯ ಚಿಂತನೆ ಬಳಿ ಗುಜರಿ ವಸ್ತುಗಳ ಸಂಗ್ರಹ ಯಾರ್ಡ್ನಲ್ಲಿ ಆದಿತ್ಯ ವಾರ ತಡ ರಾತ್ರಿ ಆಕಸ್ಮಿಕ ಬೆಂಕಿ ಹತ್ತಿಕೊಂಡಿದ್ದು, ಗುಜರಿ ಸಂಗ್ರಹ ಗೋಡಾನ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಮಾಹಿತಿ ಅರಿತ ಶಾಸಕ ವೇದವ್ಯಾಸ ಕಾಮತ್ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ವ್ಯವಸ್ಥೆ ಮಾಡಿಸಿದ್ದರು. ಪಾಂಡೇಶ್ವರ ಅಗ್ನಿ ಶಾಮಕ ದಳದ ಸುಮಾರು 6ರಷ್ಟು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಜೊತೆಗೆ ಸ್ಥಳೀಯ ಕಾರ್ಪೊರೇಟರ್ಗಳಾದ ವೀಣಮಂಗಳ, ಭರತ್ ಕುಮಾರ್ ಎಸ್, ಶೈಲೇಶ್ ಶೆಟ್ಟಿ ಬೆಂಕಿ ನಂದಿಸುವವರೆಗೆ ಜೊತೆಗಿದ್ದರು.