Home ಕರಾವಳಿ ರಿಕ್ಷಾ ಪಲ್ಟಿಯಾಗಿ ಗಂಭೀರ ಗಾಯಗೊಂಡ ಕಟೀಲು ಯಕ್ಷಗಾನ ಮೇಳದ ಕಲಾವಿದ ಸಾವು

ರಿಕ್ಷಾ ಪಲ್ಟಿಯಾಗಿ ಗಂಭೀರ ಗಾಯಗೊಂಡ ಕಟೀಲು ಯಕ್ಷಗಾನ ಮೇಳದ ಕಲಾವಿದ ಸಾವು

0

ಕಿನ್ನಿಗೋಳಿಯಲ್ಲಿ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಪಲ್ಟಿಯಾಗಿ ಚಾಲನೆ ಮಾಡುತ್ತಿದ್ದ ಕಟೀಲು ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದ ಆನಂದ ಕಟೀಲು (47) ತೀವ್ರ ಗಾಯಗೊಂಡಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಜಿ.25 ರಂದು ಶನಿವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕುತ್ತಿಗೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಶಸ್ತ್ರ ಚಿಕಿತ್ಸೆ ನಡೆಸಲು 8 ಲಕ್ಷ ರೂ.ಖರ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದರಿಂದ ಅವರನ್ನು ಅಲ್ಲಿಂದ ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎದ್ದು ಕುಳಿತುಕೊಳ್ಳುವುದಕ್ಕೆ ಆಗದೇ ಬಳಲುತ್ತಿದ್ದರು.25 ದಿನಗಳ ಬಳಿಕ ವೆನ್ಹಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಶಸ್ತ್ರ ಚಿಕಿತ್ಸೆ ನಡೆಸಲು ಎಂಟು ಲಕ್ಷ ಖರ್ಚು ಆಗಬಹುದೆಂದು ವೈದ್ಯರು ಹೇಳಿದ್ದರಿಂದ ಅವರನ್ನು ಎರಡು ದಿನಗಳ ಬಳಿಕ ವೆನ್ಸಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆ ಖರ್ಚು ನೋಡಿಕೊಳ್ಳುತ್ತೇವೆಂದು ಮೇಳದ ವ್ಯವಸ್ಥಾಪಕರು ಹೇಳಿದ್ದರೂ, ಹೆಚ್ಚಿನ ನೆರವು ನೀಡಿಲ್ಲ. ಈವರೆಗೆ 30 ಸಾವಿರ ಮಾತ್ರ ನೀಡಿದ್ದಾರೆ. 35 ವರ್ಷಗಳಿಂದ ಕಟೀಲು ಮೇಳದ ಕಲಾವಿದರಾಗಿದ್ದು, ಕೆಲವೊಮ್ಮೆ ಬಿಡುವು ಸಿಕ್ಕಾಗ ಆಟೋ ರಿಕ್ಷಾ ಚಲಾಯಿಸುತ್ತಿದ್ದರು ಎಂದು ಅವರ ಪತ್ನಿ ತಿಳಿಸಿದ್ದಾರೆ.

ಅವರು ಮೂಲತಃ ಕಾಸರಗೋಡು ಜಿಲ್ಲೆಯ ಜೋಡುಕಲ್ಲು ನಿವಾಸಿಯಾಗಿದ್ದು, ಮದುವೆಯಾದ ಬಳಿಕ ಕಟೀಲು ದೇವಸ್ಥಾನದ ಬಳಿಯಲ್ಲೇ ಮನೆ ಮಾಡಿ ಪತ್ನಿಯೊಂದಿಗೆ ನೆಲೆಸಿದ್ದರು.

LEAVE A REPLY

Please enter your comment!
Please enter your name here