Home ಕರಾವಳಿ ಮಂಗಳೂರು: ಮಸಾಜ್‌ ಸೆಂಟರ್‌ ಮೇಲೆ ದಾಳಿ ಪ್ರಕರಣ- ರಾಮ ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ...

ಮಂಗಳೂರು: ಮಸಾಜ್‌ ಸೆಂಟರ್‌ ಮೇಲೆ ದಾಳಿ ಪ್ರಕರಣ- ರಾಮ ರಾಮಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಬಂಧನ

0

ಮಂಗಳೂರು: ಮಂಗಳೂರಿನ ಬಿಜೈ ಕೆಎಸ್‌ಆರ್ ಟಿಸಿ ಬಳಿಯ ಮಸಾಜ್ ಸೆಂಟರ್ ಗೆ ರಾಮ ಸೇನಾ ಸಂಘಟನೆ ದಾಳಿ ಮಾಡಿದ ಘಟನೆ ನಡೆದಿದೆ.

ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರ ನೇತೃತ್ವದ ಶ್ರೀರಾಮ ಸೇನಾ ಸಂಘಟನೆ ಮಸಾಜ್ ಸೆಂಟರ್ ಗೆ ದಾಳಿ ನಡೆಸಿ ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೇ ಮಸಾಜ್ ಸೆಂಟರ್ ನ ಗಾಜುಗಳನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್‌ಗಳನ್ನು ಮುಚ್ಚುವಂತೆ ರಾಮ ಸೇನಾ ಸಂಘಟನೆ ಆಗ್ರಹವನ್ನು ಮಾಡಿದೆ.

ಮಸಾಜ್ ಸೆಂಟರ್‌ಗೆ ದಾಳಿ ನಡೆಸಿ ಹಿನ್ನೆಲೆಯಲ್ಲಿ ರಾಮ ಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಲಾಗಿದೆ. ಕುಡುಪಿನಲ್ಲಿರುವ ಅವರ ಮನೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗಲೇ ಅವರನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here