Home ಕರಾವಳಿ ಗೋ ಕೆಚ್ಚಲು ಕೊಯ್ದ ದುಷ್ಟರ ನಡೆಗೆ ಸಿದ್ದರಾಮಯ್ಯ 2.0 ಸರಕಾರದ ಆಡಳಿತ ನೀತಿಯೇ ಕಾರಣ –...

ಗೋ ಕೆಚ್ಚಲು ಕೊಯ್ದ ದುಷ್ಟರ ನಡೆಗೆ ಸಿದ್ದರಾಮಯ್ಯ 2.0 ಸರಕಾರದ ಆಡಳಿತ ನೀತಿಯೇ ಕಾರಣ – ಸಂಸದ ಬ್ರಿಜೇಶ್ ಚೌಟ

0

ಮಂಗಳೂರು: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಪ್ರಕರಣವನ್ನು ಖಂಡಿಸಿ ಮಂಗಳೂರಿನ ಗೋಸಂರಕ್ಷಣಾ ಸಂವರ್ಧನ ವೇದಿಕೆಯ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಯಿತು.


ಪ್ರತಿಭಟನೆಗೂ ಮುನ್ನ ಹಸು-ಕರುಗಳಿಗೆ ಗೋ ಪೂಜೆ ನೆರವೇರಿಸಲಾಯಿತು. ಬಳಿಕ ಪ್ರತಿಭಟನೆಯನ್ನು ಉದ್ದೇಶಿಸಿ ದ.ಕ.ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಗೋವಿನ ರಕ್ಷಣೆಯಿಲ್ಲದೆ ಈ ದೇಶವನ್ನು ಸ್ವರಾಜ್ಯವೆಂದು ಒಪ್ಪಿಕೊಳ್ಳುವುದಿಲ್ಲ ಎಂದು ಗಾಂಧೀಜಿ ಹೇಳಿದ್ದರು.

ಆದರೆ ಗಾಂಧಿಯ ಹೆಸರನ್ನು ಹೇಳುವ ಕಾಂಗ್ರೆಸ್ ಕಾಲದಲ್ಲಿ ಗೋವಿಗೆ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ಸಿದ್ದರಾಮಯ್ಯರ 2.0 ಸರಕಾರದ ಆಡಳಿತ ನೀತಿಯೇ ಕಾರಣ. ಈ ಸರಕಾರಕ್ಕೆ ಟಿಪ್ಪು ಸುಲ್ತಾನ್, ಔರಂಗಜೇಬ ಪ್ರೇರಣೆ. ಆ ಕಾರಣಕ್ಕೆ ಹಿಂದೂಗಳ ಭಾವನೆಗಳಿಗೆ ಘಾಸಿಗೊಳಿಸುವಂತಹ ಕಾರ್ಯ ಆಗುವಂತಿದೆ.

ಗೋವಿನ ಕೆಚ್ಚಲನ್ನು ಕಡಿಯುವುದೆಂದರೆ ಹಿಂದೂಗಳನ್ನು ಭಯದಲ್ಲಿ ಇಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಹಿಂದೂ ಧರ್ಮವನ್ನು ಕೆಣಕಲು ಬಂದರೆ ಈ ಮಣ್ಣಲ್ಲಿ ಯಾರೂ ಉಳಿಯಲ್ಲ. ಆದ್ದರಿಂದ ಸಿದ್ದರಾಮಯ್ಯ ಸರಕಾರವನ್ನು ಮನೆಗೆ ಕಳಿಸುವ ಕೆಲಸವನ್ನು ಇಲ್ಲಿ‌ನ ಜನಗಳು ಮಾಡಲಿದ್ದಾರೆ. ದನದ ಕೆಚ್ಚಲು ಕಡಿದ ಪ್ರಕರಣವಾದಾಗ ಗೃಹ ಸಚಿವರು ಸಮಜಾಯಿಷಿ ಕೊಡುವ ಕೆಲಸ ಮಾಡಿದರೆ, ಮುಖ್ಯಮಂತ್ರಿ ಮೌನವಾಗ್ತಾರೆ. ಆದ್ದರಿಂದ ಇದು ಕೇವಲ ಹೋರಾಟಕ್ಕೆ ಸೀಮಿತವಾಗಬಾರದು, ಮನೆಮನೆಗೆ ಹೋಗಿ ಜಾಗೃತಿ ಮೂಡಿಸಬೇಕು. ಸಮಾಜವನ್ನು ಎಬ್ಬಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here