ಮಂಗಳೂರು ತಾಲೂಕು ಮುತ್ತೂರು ಗ್ರಾಮ ಪಂಚಾಯತ್ ಗೆ ಒಳಪಟ್ಟ ಕೊಳವೂರು ಗ್ರಾಮದ ಬೊಳಿಯ ಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆ ಬೊಳಿಯ ಇಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು . ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀ ಗಂಗಾಧರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಶೀಲಾ ಇವರು ಆಯ್ಕೆಯಾದರು . ಸದಸ್ಯರುಗಳಾಗಿ ಶ್ರೀಮತಿ ಹರ್ಷಿಣಿ, ಶ್ರೀ ಶೇಖರ್ , ಶ್ರೀ ಜಯಂತ , ಶ್ರೀಮತಿ ರಮೀಜಾ, ಶ್ರೀಮತಿ ಮಲ್ಲಿಕಾ , ಶ್ರೀ ನವೀನ , ಶ್ರೀಮತಿ ನಮಿತಾ, ಶ್ರೀಮತಿ ನಳಿನಿ, ಶ್ರೀಮತಿ ಜಯಂತಿ , ಶ್ರೀಮತಿ ಸುಗಂಧಿ, ಶ್ರೀಮತಿ ಧನವಂತಿ, ಶ್ರೀಮತಿ ಶೋಭ , ಶ್ರೀಮತಿ ವನಿತಾ, ಶ್ರೀಮತಿ ಹರಿಣಾಕ್ಷಿ , ಶ್ರೀಮತಿ ಪುಷ್ಪಾವತಿ , ಶ್ರೀಮತಿ ಶೋಭ ಆಯ್ಕೆಯಾದರು . ನಾಮ ನಿರ್ದೇಶಿತ ಸದಸ್ಯರಾಗಿ ಮುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಶ್ಮಾ ಆಯ್ಕೆಯಾದರು . ಈ ಸಂಧರ್ಭದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ , ಶಾಲಾ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಹಾಗೂ ಶಿಕ್ಷಕ ವೃಂದ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು .
Home ಕರಾವಳಿ ಮಂಗಳೂರು ತಾಲೂಕಿನ ಕೊಳವೂರು ಗ್ರಾಮದ ಬೊಳಿಯ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿಯ ಅಧ್ಯಕ್ಷರಾಗಿ ಗಂಗಾಧರ್...