Home ಉಡುಪಿ ಯಕ್ಷಗಾನ ಪ್ರದರ್ಶನಕ್ಕೆ ಪೋಲೀಸರ ತಡೆ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ- ಶುಭದರಾವ್

ಯಕ್ಷಗಾನ ಪ್ರದರ್ಶನಕ್ಕೆ ಪೋಲೀಸರ ತಡೆ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ- ಶುಭದರಾವ್

0

ಕಾರ್ಕಳ: ಮುಂಡ್ಳಿ ಪರಿಸರದಲ್ಲಿ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನಕ್ಕೆ ದ್ವನಿವರ್ಧಕದ ಬಳಕೆಗೆ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಪೋಲೀಸರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ವೈಯಕ್ತಿಕ ಮನಸ್ಥಾಪದ ಕಾರಣಕ್ಕೆ ಯಾರೋ ನೀಡಿದ ದೂರಿಗೆ ಪಕ್ಷ ಹೊಣೆಯಾಗುದಿಲ್ಲ ಅದ್ದರಿಂದ ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮೇಲೆ ಶಾಸಕರು ಮತ್ತು ಕ್ಷೇತ್ರಾದ್ಯಕ್ಷರು ಮಾಡಿದ ಮಿತ್ಯ ಆರೋಪವನ್ನು ಸಹಿಸಲು ಸಾದ್ಯವಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ತಿಳಿಸಿದ್ದಾರೆ.

ಯಕ್ಷಗಾನ ಕರಾವಳಿಯ ಗಂಡು ಕಲೆ, ನಮ್ಮ ಸಂಸ್ಕೃತಿಯ ಪ್ರತೀಕ, ಅದಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ, ಅದರ ಪ್ರದರ್ಶನವನ್ನು ಮತ್ತು ಕಾಲವಿದರನ್ನು ಕಾಂಗ್ರೆಸ್ ನಿರಂತರ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ, ಅದರ ಪ್ರದರ್ಶನವನ್ನು ಯಾರು ತಡೆದರೂ‌ ನಮ್ಮ ಆಕ್ಷೇಪವಿದೆ ಒಂದು ವೇಳೆ ಕಾಂಗ್ರೆಸ್ ನಾಯಕ ತಡೆದಿದ್ದರೆ ಯಾರೆಂದು ದಾಖಲೆ ಸಹಿತ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಆದರೆ ಈ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎನ್ನುವುದು ಶಾಸಕರ ಮತ್ತು ಕ್ಷೇತ್ರಾದ್ಯಕ್ಷರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ, ತಡೆಯೊಡ್ಡುವ ಚಾಳಿ ಕಾಂಗ್ರೆಸಿಗಿಲ್ಲ ಅದು ಬಿಜೆಪಿಯ ಸಂಸ್ಕೃತಿ ಎನ್ನುವುದು ಇತೀಚಿಗೆ ನಡೆದ ಕಾರ್ಲೋತ್ಸವದ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಕಾರ್ಲೋತ್ಸವದ ಕಾರ್ಯಕ್ರಮಕ್ಕೆ ತಡೆ ಮಾಡುವ ಪ್ರಯತ್ನ ಪಟ್ಟು ಕೈ ಸುಟ್ಟುಕೊಂಡಿರುವ ಬಿಜೆಪಿ‌ ನಾಯಕರ ಮಾನ‌ ಬೀದಿ ಪಾಲಾಗಿದೆ, ಎರಡನೇ ಸಾಲಿನ ನಾಯಕರು ಬೆಳೆದರೆ ನಮಗೆ ಕಷ್ಟ ಎಂದು
ತನ್ನ ಪಕ್ಷ ಅಧಿಕಾರಕ್ಕೆ ಬರಲು ಹಗಲು ರಾತ್ರಿ ದುಡಿದ ಪಕ್ಷದ ಹಿರಿಯ, ಕಿರಿಯ ನಾಯಕರು ಮತ್ತು ಸಾರ್ವಜನಿಕರ ಸಹಕಾರದಲ್ಲಿ ಅಯೋಜಿಸಿದ್ದ ಕಾರ್ಲೋತ್ಸವಕ್ಕೆ ಎಷ್ಟೆಲ್ಲಾ ತಡೆ ನೀಡಿದ್ದರು ಎನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ ಈ ಕಾರ್ಯಕ್ರಮಕ್ಕೆ ತಡೆಯೊಡ್ಡುವ ಮೂಲಕ ಮನೆಯವರನ್ನೆ ಪರಸ್ಪರ ಎತ್ತಿ ಕಟ್ಟುವ ಪ್ರಯತ್ನ ಮಾಡಿರುವುದೂ ಗುಟ್ಟಾಗಿ ಉಳಿದಿಲ್ಲ ಎಂದರು.

ಕಾರ್ಯಕ್ರಮ ಯಾವುದೇ ಆಗಿರಲಿ, ಯಾರೇ ಮಾಡಿರಲಿ ಅದರ ಹಿಂದೆ ಅನೇಕರ ಶ್ರಮವಿದೆ ಅದನ್ನು ಅರ್ಧಕ್ಕೆ ನಿಲ್ಲಿಸುವ ಪ್ರಯತ್ನ ಶತ್ರುಗಳು ಮಾಡಬಾರದು ಆದರೆ ಬಿಜೆಪಿಯ ಕೆಲ ನಾಯಕರಿಂದ ಅದಕ್ಕೆ ತಡೆಯಾದಾಗ ಕಾಂಗ್ರೆಸ್ ಆಯೋಜಕರ ಬೆನ್ನಿಗೆ ನಿಂತು ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಹಕಾರ ಮಾಡಿದೆ ಎನ್ನುವುದನ್ನು ಶಾಸಕರು ಮತ್ತು ಕ್ಷೇತ್ರದ್ಯಾಕ್ಷರು ನೆನಪು‌ ಮಾಡಿಕೊಳ್ಳಲಿ ಎಂದು ಶುಭದರಾವ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here