ಮಂಗಳೂರು: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್.ಪಿ.ಆರ್ ಫಿಲ್ಮ್ಸ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಜನವರಿ 24 ರಂದು ತೆರೆಕಾಣಲಿದೆ
ತುಳು ಭಾಷೆಯ ಬೆಳವಣಿಗೆಗೆ ತುಳು ಚಿತ್ರ ರಂಗದ ಬೆಳವಣಿಗೆ ಕೂಡ ಅತ್ಯಗತ್ಯ. ಪ್ರತಿಯೊಬ್ಬ ತುಳುವನು ತುಳು ಚಿತ್ರ ನೋಡಿ ಇಷ್ಟ ಪಟ್ಟು ಹರಸಿದರೆ, ಚಿತ್ರರಂಗ ಉತ್ತಮವಾಗಿ ಬೆಳೆಯುತ್ತದೆ.
ತುಳು ಚಿತ್ರಗಳನ್ನು ಜನ ಮನ ಮುಟ್ಟುವ ರೀತಿಯಲ್ಲಿ ತಯಾರಿಸಿ ಪ್ರಸ್ತುತ ಪಡಿಸಲು ಎಷ್ಟೇ ಪ್ರಯತ್ನಪಟ್ಟರು , ವಿಸ್ತಾರವಾದ ತುಳುನಾಡಿನಲ್ಲಿ ಒಂದು ಪರಿಧಿಯವರೆಗೂ ಮಾತ್ರ ಅದನ್ನು ತಲುಪಿಸಲು ಸಾಧ್ಯವಾಗುತ್ತಿದೆ. ತುಳು ಚಿತ್ರರಂಗ ತನ್ನ ಪರಿಧಿಯನ್ನು ವಿಸ್ತರಿಸಲು ಪ್ರೋತ್ಸಾಹಬೇಕಾಗಿದೆ. ಈ ಪ್ರೋತ್ಸಾಹಕ್ಕಾಗಿ ಹಲವಾರು ಬಾಗಿಲು ತಟ್ಟುವುದು ನಮ್ಮ ಕರ್ತವ್ಯ ಹಾಗೂ ಅನಿವಾರ್ಯತೆಯೂ ಹೌದು. ಇಂಥಾ ಅನಿವಾರ್ಯತೆಯ ಸಂದರ್ಭದಲ್ಲಿ ಬಾಗಿಲು ತೆರೆದು ನಮ್ಮನ್ನು ಬಾಚಿ ತಬ್ಬಿಕೊಂಡವರು ರೋಹನ್ ಕಾರ್ಪೊರೇಷನ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆದಂತಹಾ ರೋಹನ್ ಮೊಂತೇರೊರವರು. ಪ್ರಪ್ರಥಮ ಬಾರಿಗೆ ಒಬ್ಬ ಬಿಸಿನೆಸ್ ಜಾಯoಟ್ ತುಳು ಚಿತ್ರರಂಗಕ್ಕೆ ಈ ರೀತಿಯ ಸಹಕಾರ ನೀಡಿದ್ದು, ಶ್ಲಾಘನೀಯ. ರೋಹನ್ ಮೊಂತೇರೊರವರು ‘MIDDLE CLASS ಫ್ಯಾಮಿಲಿ’ ತುಳು ಚಿತ್ರವನ್ನು ವೀಕ್ಷಿಸಿ , ಇಷ್ಟ ಪಟ್ಟು ತನ್ನ ಬೆಂಬಲವನ್ನು ಘೋಷಿಸಿದ್ದಾರೆ. ಇದೀಗ ‘ROHAN CORPORATION’ ಹಾಗೂ ‘MIDDLE CLASS ಫ್ಯಾಮಿಲಿ’ ಸಮಾಗಮದಲ್ಲಿ ತುಳು ಚಿತ್ರ ತನ್ನ ವಿಜಯದ ಇನ್ನೊಂದು ಮೆಟ್ಟಿಲು ಹತ್ತಲು ತಾಯಾರಾಗಿರುವುದು ಖಚಿತ.
‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇಲ್ಲಿ ದುಡಿದಿದ್ದಾರೆ. ಮುಖ್ಯವಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಇಲ್ಲೂ ನಿರ್ದೇಶಕರಾಗಿದ್ದಾರೆ. ವಿನೀತ್ ಕುಮಾರ್ ನಾಯಕ ನಟನಾಗಿ ಸಮತಾ ಅಮೀನ್ ನಾಯಕಿಯಾಗಿ ಹಾಗೂ ತುಳು ಚಿತ್ರರಂಗದ ಮೇರು ಕಲಾವಿದರಾದ ನವೀನ್ ಡಿ.ಪಡೀಲ್,ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಚೈತ್ರಾ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪ ವರ್ಕಾಡಿ, ರವಿ ರಾಮಕುಂಜ ಮತ್ತಿತರರು ಅಭಿನಯಿಸಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್ ಪಿ, ಸಂಕಲನ ವಿಶಾಲ್ ದೇವಾಡಿಗ, ವಸ್ತ್ರ ವಿನ್ಯಾಸ ವರ್ಷ ಆಚಾರ್ಯ ಹಾಗೂ ನವೀನ್ ಕುಮಾರ್ ಶೆಟ್ಟಿ ಮತ್ತು ವಿನಾಯಕ ಆಚಾರ್ಯ ನೃತ್ಯ ಸಂಯೋಜಿಸಿದ್ದಾರೆ.
ಪವನ್ ಕುಮಾರ್,ನಿತಿನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಭರತ್ ಕುಮಾರ್ ಗಟ್ಟಿ, ಗಣೇಶ್ ಕೊಲ್ಯ, ಅಶ್ವಿನಿ ರಕ್ಷಿತ್, ಕ್ಷಿತಿಂದ್ರ ಕೋಟೆಕಾರ್, ಮಿತ್ರಂಪಾಡಿ ಜಯರಾಮ್ ರೈ, ಕಿರಣ್ ಶೆಟ್ಟಿ, ಸ್ವಸ್ತಿಕ್ ಆಚಾರ್ಯ ಸಹ ನಿರ್ಮಾಪಕರಾಗಿದ್ದಾರೆ.
ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ ಹಾಗೂ ನಿತಿನ್ ಶೇರಿಗಾರ್ ಮತ್ತು ಆಯುಷ್ಮಾನ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಈಗಾಗಲೇ ಈ ಚಿತ್ರವನ್ನು ಯುಎಇ ರಾಷ್ಟ್ರದಲ್ಲಿ ಮೋನಿಷ ಶರತ್ ಶೆಟ್ಟಿ , ಹರೀಶ್ ಬಂಗೇರ, ಹರೀಶ್ ಶೇರಿಗಾರ್, ಗಿರೀಶ್ ನಾರಾಯಣ್, ದೀಪಕ್ ಕುಮಾರ್ ರವರು ಅರ್ಪಿಸಲು ಮುಂದಾಗಿದ್ದು, ದುಬೈನ ಗಮ್ಮತ್ ಕಲಾವಿದರ ಪೈಕಿ 5 ಕಲಾವಿದರಾದ ಚಿದಾನಂದ ಪೂಜಾರಿ , ಗಿರೀಶ್ ನಾರಾಯಣ್, ಡೋನಿ ಕೊರಿಯ, ಆಶಾ ಕೊರಿಯ , ದೀಪ್ತಿ ದಿನ್ ರಾಜ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಜನವರಿ 18, 19 ರಂದು ಯುಎಇ ಯಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಸಿನಿಮಾ ಬಿಡುಗಡೆಯ ಮೊದಲೇ ಯುಎಇಯಲ್ಲಿ 30 ಲಕ್ಷಗಳ ಗಳಿಕೆಯನ್ನು ಮಾಡಿದೆ. ಇದು ತುಳು ಸಿನಿಮಾರಂಗದಲ್ಲಿ ದಾಖಲೆಯಾಗಿದೆ.
ಸಿನಿಮಾ ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಹಾಸ್ಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ‘ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ಸಿನಿಮಾದಂತೆ ಈ ಸಿನಿಮಾ ಕೂಡಾ ತುಳುಚಿತ್ರರಂಗದಲ್ಲಿ ದೊಡ್ಡ ಸೌಂಡ್ ಮಾಡಲಿದೆ. ಈಗಾಗಲೇ ಸಿನಿಮಾದ ಟೈಟಲ್ ಸ್ವಾಂಗ್ ಸೂಪರ್ ಹಿಟ್ ಆಗಿದೆ. ಜೊತೆಗೆ ಸಿನಿಮಾದ ನಾಯಕ ನಟ ವಿನೀತ್ ಕುಮಾರ್ ಮತ್ತು ನಾಯಕಿ ನಟಿ ಸಮತಾ ಅಮೀನ್ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ.
Home ಕರಾವಳಿ ಜನವರಿ 24 ರಂದು ತೆರೆಕಾಣಲಿರುವ ‘MIDDLE CLASS ಫ್ಯಾಮಿಲಿ’ ತುಳು ಚಿತ್ರದೊಂದಿಗೆ ಕೈಜೋಡಿಸಿ ಅರ್ಪಿಸಲು ಮುಂದಾಗಿರುವ...