ಮಂಗಳೂರು: ಮೊದಲ ಬಾರಿಗೆ ತುಳು ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಅವರು ಜ.14 ರಂದು ಮಂಗಳೂರಿಗೆ ಆಗಮಿಸಿದರು.
ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ತುಳು ಚಿತ್ರದ ಚಿತ್ರೀಕರಣಕ್ಕೆ ಮಂಗಳೂರಿಗೆ ಬಂದ ಸುನೀಲ್ ಶೆಟ್ಟಿ ಅವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.ಈ ವೇಳೆ ಮಾತನಾಡಿದ ಸುನೀಲ್ ಶೆಟ್ಟಿ ಅವರು, “ಮೊದಲ ಬಾರಿಗೆ ತುಳು ಚಿತ್ರದಲ್ಲಿ ನಟಿಸಲಿದ್ದೇನೆ. ಒಂದು ಉತ್ತಮ ಚಿತ್ರ ಸಿಕ್ಕಿದರೆ ತುಳುವಿನಲ್ಲಿ ಅಭಿನಯಿಸುತ್ತೇನೆ ಎಂದಿದ್ದೆ. ಇದೀಗ ಕಾಲ ಕೂಡಿ ಬಂದಿದೆ. ರೂಪೇಶ್ ಅವರ ಜೈ ಚಿತ್ರದಲ್ಲಿ ಪಾತ್ರ ವಹಿಸಲಿದ್ದೇನೆ” ಎಂದರು.