Home ಕರಾವಳಿ ಪುತ್ತೂರು: ತಲೆಮರೆಸಿಕೊಂಡಿದ್ದ ಅಂತರಾಜ್ಯ ಕಳ್ಳತನ ಆರೋಪಿ ಸೂರಜ್ ಅರೆಸ್ಟ್

ಪುತ್ತೂರು: ತಲೆಮರೆಸಿಕೊಂಡಿದ್ದ ಅಂತರಾಜ್ಯ ಕಳ್ಳತನ ಆರೋಪಿ ಸೂರಜ್ ಅರೆಸ್ಟ್

0

ಪುತ್ತೂರು: ಹಾಡುಹಗಲೇ ಮನೆಯೊಳಗೆ ನುಗ್ಗಿ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನಕ್ಕೆ ಬಳಸಿದ ಕಾರು ಸಮೇತ ಪ್ರಮುಖ ಆರೋಪಿ ಯನ್ನು ಪೊಲೀಸರು ಬಂಧಿಸಿ, ಚಿನ್ನಾಭರಣ ಸಮೇತ ರೂ. 21 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಯನ್ನು ಅಂತರಾಜ್ಯ ಮನೆ ಕಳ್ಳತನದ ಪ್ರಮುಖ ಆರೋಪಿ ಕೇರಳ ಮೂಲದ ಸೂರಜ್‌ ಕೆ ಎಂದು ಗುರುತಿಸಲಾಗಿದೆ.


ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಸರ್ವೆ ಭಕ್ತಕೋಡಿ ಎಂಬಲ್ಲಿ ಡಿಸೆಂಬರ್‌ 20 ರಂದು ಹಾಡುಹಗಲೇ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹಿಂಬಾಗಿಲನ್ನು ಕಾಲಿನಿಂದ ಒದ್ದು ಬಾಗಿಲು ಮುರಿದು ಮನೆಯ ಒಳಗಿದ್ದ ಗೋಡ್ರೆಜನ್ನು ಮೀಟಿ ಚಿನ್ನಾಭರಣವನ್ನು ಕಳವು ಗೈದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಕಡೆ ಕಳ್ಳತನ ಆಗುತ್ತಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಜಂಟಿ ಕಾರ್ಯಾಚರಣೆ ನಡೆಸಿ ಹಗಲು ಮನೆ ಕಳ್ಳತನ ನಡೆಸಿ ಯಾವುದೇ ಸುಳಿವು ನೀಡದೇ ಪರಾರಿಯಾಗುತ್ತಿದ್ದ ಆರೋಪಿ ಕೇರಳ ಮೂಲದ ಸೂರಜ್‌ ಕೆ (36 ವರ್ಷ) ಎಂಬಾತನನ್ನು ಕಳ್ಳತನಕ್ಕೆ ಬಳಸುತ್ತಿದ್ದ ಕಾರು ಸಮೇತ ಬಂಧಿಸುವಲ್ಲಿ ಅಪರಾಧ ಪತ್ತೆ ತಂಡದವರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here