“ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವವು ಕರಾವಳಿ ಭಾಗದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ. ಆದರೆ ಈ ಬಾರಿ ಉತ್ಸವದ ಭಾಗವಾಗಿ ನಡೆಯುವ ಫಿಲಂ ಫೆಸ್ಟಿವಲ್‌ನಲ್ಲಿ ತುಳು ಚಿತ್ರರಂಗವನ್ನು ಕಡೆಗಣಿಸಿರುವುದು ಪ್ರಮುಖವಾದ ವಿವಾದಕ್ಕೆ ಕಾರಣವಾಗಿದೆ.”
“ತುಳು ಚಿತ್ರರಂಗ ಈಗಾಗಲೇ ಐತಿಹಾಸಿಕ ಮೈಲಿಗಲ್ಲುಗಳನ್ನು ಸಾಧಿಸಿರುವ ಸಿನಿಮಾರಂಗ. ಪ್ರತಿವರ್ಷ 8 ರಿಂದ 10 ಚಲನಚಿತ್ರಗಳು ಬಿಡುಗಡೆಯಾಗುತ್ತಿರುವ ಈ ರಂಗವು ಸ್ಥಳೀಯ ಕಲೆ, ಭಾಷೆ, ಹಾಗೂ ಸಂಸ್ಕೃತಿಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಆದರೆ, ಇದಾವುದಕ್ಕೂ ಕಡಿಮೆ ಮಾಡದೆ, ತುಳುನಾಡಿನಲ್ಲಿ ನಡೆಯುವ ಫಿಲಂ ಫೆಸ್ಟಿವಲ್‌ನಲ್ಲಿ ತುಳು ಚಿತ್ರರಂಗಕ್ಕೆ ಯಾವುದೇ ರೀತಿಯ ಪ್ರೋತ್ಸಾಹ ನೀಡದೆ ಇರುವುದನ್ನು ಹಲವರು ಪ್ರಶ್ನಿಸಿದ್ದಾರೆ.”
“ತುಳು ಚಿತ್ರರಂಗವು ನಮ್ಮ ಕಲೆ, ಸಂಸ್ಕೃತಿಯನ್ನು ಪೋಷಿಸುವ ಮಹತ್ವದ ಭಾಗ. ಫಿಲಂ ಫೆಸ್ಟಿವಲ್‌ನಲ್ಲಿ ನಾವು ಕಡೆಗಣನೆಗೆ ಒಳಗಾದವು ತೀವ್ರ ಬೇಸರ ಉಂಟುಮಾಡಿದೆ. ಜಿಲ್ಲಾಡಳಿತವು ತಕ್ಷಣವಾಗಿ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಕೋಸ್ಟಲ್ ವುಡ್ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರಿ ಒಕ್ಕೂಟ ಆಗ್ರಹಿಸುತ್ತೇವೆ.”
“ಅಧಿಕೃತ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕರಾವಳಿ ಉತ್ಸವವು ನಮ್ಮ ಸ್ಥಳೀಯ ಕಲೆ ಹಾಗೂ ಸಂಸ್ಕೃತಿಯ ಗೌರವವನ್ನು ಕಾಪಾಡಲು ಮುಂದಾಗುತ್ತದೆ ಎಂಬ ನಿರೀಕ್ಷೆಯಿದೆ.”