ಪಡುಬಿದ್ರಿ : ಆರು ಮಂದಿ ಗೆಳೆಯರು ಸೇರಿ ಹೆಜಮಾಡಿ ಸಮುದ್ರದಲ್ಲಿ ತೀರ್ಥ ಸ್ಥಾನಕ್ಕೆ ತೆರಳಿದ್ದು ಇಬ್ಬರು ನೀರುಪಾಲಾದ ಘಟನೆ ಸಂಭವಿಸಿದೆ. ಅಮಾನ್(19), ಅಕ್ಷಯ್ (19) ನೀರುಪಾಲಾದ ಬಾಲಕರು.



ಇವರು ಮದ್ಯಾಹ್ನದವರೆಗೂ ನೀರಾಟವಾಡುತ್ತಿದ್ದು, ಸುಮಾರು ಒಂದು ಕಿಮೀ ದೂರದವರೆಗೆ ಈಜಾಡಿಕೊಂಡು ಹೋಗಿದ್ದರು. ಮೂವರು ಕಡಲಿಂದ ಮೇಲೆ ಬಂದರೆ ಉಳಿದ ಮೂವರು ಸ್ವಲ್ಪ ಈಜಾಡಿ ಬರುವುದಾಗಿ ಮತ್ತೆ ನೀರಾಟವಾಡುತ್ತಿದಂತೆ ಓರ್ವನನ್ನು ಕಡಲು ತನ್ನೊಡಲಿಗೆ ಸೇರಿಸಿಕೊಳ್ಳುತ್ತಿದಂತೆ ಮತ್ತಿಬ್ಬರು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ.ಈ ಸಂದರ್ಭ ಅವಘಡ ಸಂಭವಿಸಿದೆ.


ಮೇಲಿದ್ದವರು ರಕ್ಷಣೆಗಾಗಿ ಕೂಗಾಡಿದರೂ ಇವರು ಬಹಳ ದೂರ ಇದ್ದುದರಿಂದ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ.ಮೂವರನ್ನು ಮೇಲೆತ್ತಲಾಯಿತಾದರೂ, ಅಷ್ಟರಲ್ಲೇ ಇಬ್ಬರು ನೀರುಪಾಲಾಗಿದ್ದರು. ಪವನ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.